Saturday, October 12, 2024

ಉಡುಪಿ ತಾಲೂಕು ಟೆನಿಸ್‌ ಬಾಲ್‌ ಕ್ರಿಕೆಟ್‌ ಪ್ರೀಮಿಯರ್‌ ಲೀಗ್

Sportsmail

ಟೆನಿಸ್‌ ಬಾಲ್‌ ಕ್ರಿಕೆಟ್‌ ಅಸೋಸಿಯೇಷನ್‌ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ನಡೆಯಲಿರುವ ಉಡುಪಿ ತಾಲೂಕು ಮಟ್ಟದ ಕ್ರಿಕೆಟ್‌ ಪ್ರೀಮಿಯರ್‌ ಲೀಗ್‌ನ ವೇಳಾಪಟ್ಟಿ ಪ್ರಕಟವಾಗಿದೆ.

 

ಕಾರ್ಕಳ, ಬೈಂದೂರು, ಕುಂದಾಪುರ, ಉಡುಪಿ, ಕಾಪು, ಹೆಬ್ರಿ ಮತ್ತು ಬ್ರಹ್ಮಾವರ ವಲಯ ಮಟ್ಟದಲ್ಲಿ ಕ್ರಿಕೆಟ್‌ ಟೂರ್ನಿ ನಡೆಯಲಿದೆ.

ಡಿಸೆಂಬರ್‌ 4 ಮತ್ತು 5  ರಂದು ಕಾರ್ಕಳದ ಸ್ವರಾಜ್‌ ಮೈದಾನದಲ್ಲಿ ಕಾರ್ಕಳ ತಾಲೂಕು ವಲಯದ ಪಂದ್ಯಗಳು ನಡೆಯಲಿವೆ. ಸತೀಶ್‌ ಕಾರ್ಕಳ ಮತ್ತು ಬಳಗ ಪಂದ್ಯಾಟವನ್ನು ನಿರ್ವಹಿಸಲಿದೆ.

ಡಿಸೆಂಬರ್‌ 11 ಮತ್ತು 12 ರಂದು ಬೈಂದೂರಿನ ಗಾಂಧೀ ಮೈದಾನದಲ್ಲಿ ಬೈಂದೂರು ವಲಯದ ಪಂದ್ಯಗಳು ನಡೆಯಲಿವೆ. ಗಿರೀಶ್‌ ಹಾಗೂ ದಿನೇಶ್‌ ಬೈಂದೂರು ಬಳಗದ ಮುಂದಾಳತ್ವದಲ್ಲಿ ಈ ಟೂರ್ನಿ ನಡೆಯಲಿದೆ.

 

ಮನೋಜ್‌ ನಾಯರ್‌, ಸತೀಶ್‌ ಕೋಟ್ಯಾನ್‌ ಮತ್ತು ಶ್ರೀಪಾದ ಉಪಾಧ್ಯ ಮತ್ತು ಗೆಳೆಯರ ಮುತುವರ್ಜಿಯಲ್ಲಿ ಡಿಸೆಂಬರ್‌ 18 ಮತ್ತು 19 ರಂದು ಕುಂದಾಪುರದ ಗಾಂಧೀ ಮೈದಾನದಲ್ಲಿ ಕುಂದಾಪುರ ವಲಯದ ಪಂದ್ಯಗಳು ನಡೆಯಲಿವೆ.

ಉಡುಪಿ ವಲಯದ ಪಂದ್ಯಗಳು ಅಮರನಾಥ್‌ ಭಟ್‌, ಡಾ. ವಿನೋದ್‌ ಮತ್ತು ಚೇತನ್‌ ದೇವಾಡಿಗ ಹಾಗೂ ಬಳಗದ ಮುಂದಾಳತ್ವದಲ್ಲಿ ಉಡುಪಿ ತಾಲೂಕು ವಲಯದ ಪಂದ್ಯಗಳು ಡಿಸೆಂಬರ್‌ 25 ಮತ್ತು  26 ಎಂಜಿಎಂ, ಬೀಡಿನಗುಡ್ಡೆ ಹಾಗೂ ಮಲ್ಪೆಯ ಗಾಂಧೀ ಶತಾಬ್ದಿ ಮೈದಾನದಲ್ಲಿ ನಡೆಯಲಿದೆ.

ಉದ್ಯಾವರ ಗ್ರಾಮ ಪಂಚಾಯಿತಿ, ಪಡುಬಿದ್ರಿ ಬೋರ್ಡ್‌ ಹೈಸ್ಕೂಲ್‌ ಮೈದಾನ ಮತ್ತು ಕಟಪಾಡಿ ಎಸ್‌ವಿಎಸ್‌ ಕ್ರೀಡಾಂಗಣ ಹಳ್ಳಿಗುಡ್ಡೆ ಇಲ್ಲಿ ಜನವರಿ 1 ಮತ್ತು 2, 2022, ರಂದು ಶರತ್‌ ಶೆಟ್ಟಿ, ಪ್ರವೀಣ್‌ ಮತ್ತು ಸಫ್ತಾರ್‌ ಅವರ ಮುಂದಾಳತ್ವದಲ್ಲಿ ಕಾಪು ವಲಯದ ಪಂದ್ಯಗಳು ನಡೆಯಲಿವೆ.

ಜನವರಿ 8 ಮತ್ತು 9 ರಂದು ಜೂನಿಯರ್‌ ಕಾಲೇಜು ಮೈದಾನ ಹೆಬ್ರಿ ಇಲ್ಲಿ ಸತೀಶ್‌ ಶೆಟ್ಟಿ ಮತ್ತು ಬಳಗದ ಜವಾಬ್ದಾರಿಯಲ್ಲಿ ಹೆಬ್ರಿ ವಲಯದ ಪಂದ್ಯಗಳು ನಡೆಯಲಿವೆ.

ಗೌತಮ್‌ ಶೆಟ್ಟಿ, ಮುನ್ನರಾವ್‌ ಮತ್ತು ವಿಷ್ಣುಮೂರ್ತಿ ಅವರ ಮುತುವರ್ಜಿಯಲ್ಲಿ ಬ್ರಹ್ಮಾವರ ವಲಯದ ಪಂದ್ಯಗಳು ನಡೆಯಲಿದ್ದು, ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಉಡುಪಿ ಜಿಲ್ಲಾ ಟೆನಿಸ್‌ ಬಾಲ್‌ ಕ್ರಿಕೆಟ್‌ ಅಸೋಸಿಯೇಷನ್‌ನ ಪ್ರಕಟಣೆ ತಿಳಿಸಿದೆ.

 

Related Articles