Sunday, April 14, 2024

ಮೈಸೂರು ವಾರಿಯರ್ಸ್‌ಗೆ ಸುಚಿತ್ ನಾಯಕ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡಕ್ಕೆ ಅನುಭವಿ ಸ್ಪಿನ್ನರ್ ಜೆ. ಸುಚಿತ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

 ಭಾರತ ತಂಡದ ಮಾಜಿ ಬೌಲರ್ ವೆಂಕಟೇಶ್ ಪ್ರಸಾರ್ ಅವರು ತಂಡದ ಪ್ರಮುಖ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಾರಿಯ ತಂಡವನ್ನು ಪ್ರಕಟಿಸಲಾಯಿತು. ತಂಡದ ಮ್ಯಾನೇಜರ್ ಎಂ.ಆರ್. ಸುರೇಶ್ ವೇದಿಕೆಗೆ ಪ್ರತಿಯೊಬ್ಬ ಆಟಗಾರರನ್ನು ಕರೆದು ತಂಡವನ್ನು ಪ್ರಕಟಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ವಿವಿಧ  ಹಂತದ ಪಂದ್ಯಗಳಲ್ಲಿ ಆಡಿದ ೧೮ ಮಂದಿ ಆಟಗಾರರು ಮೈಸೂರು ವಾರಿಯರ್ಸ್ ತಂಡದಲ್ಲಿದ್ದಾರೆ.
ಅಮಿತ್ ವರ್ಮಾ, ಜೆ. ಸುಚಿತ್, ಕೆ. ಗೌತಮ್, ರಾಜು ಭಟ್ಕಳ್, ಶೋಯೇಬ್ ಮ್ಯಾನೇಜರ್ ಅವರಂಥ ಆಟಗಾರರಿಂದ ಕೂಡಿರುವ ಮೈಸೂರು ವಾರಿಯರ್ಸ್ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ೨೦೧೪ರಲ್ಲಿ ಮೈಸೂರು ವಾರಿಯರ್ಸ್ ತಂಡ ಉತ್ತಮ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಈ ಬಾರಿಯು ಅದೇ ಗುರಿಯೊಂದಿಗೆ ಅಂಗಣಕ್ಕಿಳಿಯಲಿದೆ.
ಮೈಸೂರು ವಾರಿಯರ್ಸ್ ತಂಡದ ಮಾಲೀಕ ಹಾಗೂ ಸೈಕಲ್‌ಪ್ಯೂರ್ ಅಗರ್‌ಬತ್ತಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಸಿಎ ಮೈಸೂರು ವಲಯದ ಸಂಚಾಲಕ ಲಾಲ್‌ಚಂದರ್, ಎ.ವಿ. ಶಶಿಧರ್, ಅಧ್ಯಕ್ಪ  ಸುಧಾಕರ ರೈ, ಎನ್.ಆರ್. ಗ್ರೂಪ್‌ನ ಆರ್. ಗುರು, ಪವನ್ ರಂಗಾ, ಕಿರಣ್ ರಂಗಾ, ಅನಿರುಧ್  ರಂಗಾ ಹಾಗೂ ಇತರ ಗಣ್ಯರು ಈ ಸಂದರ್ಭ ದಲ್ಲಿ  ಹಾಜರಿದ್ದರು.

ತಂಡದ ವಿವರ

ಜೆ. ಸುಚಿತ್ (ನಾಯಕ), ಕೆ. ಗೌತಮ್, ಅಮಿತ್ ವರ್ಮಾ, ರಾಜು ಭಟ್ಕಳ್, ಭರತ್, ಮಂಜುನಾಥ್, ಶೋಯೇಬ್ ಮ್ಯಾನೇಜರ್, ಅರ್ಜುನ್ ಹೊಯ್ಸಳ, ಕೆ.ವಿ. ಸಿದ್ಧಾರ್ಥ್, ಪ್ರತೀಕ್ ಜೈನ್, ವೈಶಾಖ್ ವಿಜಯ ಕುಮಾರ್, ಶರತ್ ಶ್ರೀನಿವಾಸ್, ಕೆ.ಎಚ್. ಮನೋಜ್, ಕುಶಾಲ್ ವಾಧ್ವಾನಿ, ಲವ್‌ನಿತ್ ಸಿಸೋಡಿಯಾ, ವಿನಯ್ ಸಾಗರ್, ಕಿಶನ್ ಬೆಡಾರೆ,  ಗೌತಮ್ ಸಾಗರ್.

ತಂಡದ ಮೆಂಟರ್-ವೆಂಕಟೇಶ್ ಪ್ರಸಾದ್, ಪ್ರಧಾನ ಕೋಚ್- ಆರ್. ಎಕ್ಸ್. ಮುರಳಿ, ಫಿಸಿಯೋ-ಶ್ರೀರಂಗ ಮೋಹನ್‌ದಾಸ್, ಫಿಟ್ನೆಸ್ ಟ್ರೈನರ್-ಶ್ಯಾಮ್‌ಲಾಲ್, ತಂಡದ ಮ್ಯಾನೇಜರ್- ಎಂ.ಆರ್. ಸುರೇಶ್, ಸಂಯೋಜಕ-ಎನ್.ಅರುಣ್ ಕುಮಾರ್.ಆರ್. ಮಧುಸೂಧನ್

Related Articles