Saturday, July 27, 2024

ಯೂತ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ

ಸ್ಪೋರ್ಟ್ಸ್ ಮೇಲ್ ವರದಿ:

ಅಕ್ಟೋಬರ್ ೬ ರಿಂದ ೧೮ರವರೆಗೆ ಬ್ಯೂನಸ್‌ಐರಿಸ್‌ನಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ಸ್ ಗೇಮ್ಸ್‌ಗೆ ಭಾರತ ಮಹಿಳಾ ಹಾಗೂ ಪುರುಷರ ತಂಡ ಹಾಕಿ ೫ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದೆ ಎಂದು ಅಂತಾರಾಷ್ಟ್ರೀಯ ಹಾಕಿ  ಫೆಡರೇಷನ್ ತಿಳಿಸಿದೆ.

ಬ್ಯಾಂಕಾಕ್ ಹಾಗೂ ಥಾಯ್ಲೆಂಡ್‌ನಲ್ಲಿ ನಡೆದ ಏಷ್ಯನ್ ಯೂತ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ಮೂಲಕ  ಭಾರತ ಮಹಿಳಾ ಹಾಗೂ ಪುರುಷರ ತಂಡ ಆಯ್ಕೆಯಾಗಿತ್ತು. ಪುರುಷರ ತಂಡ  ಫೈನಲ್ ಪಂದ್ಯದಲ್ಲಿ ನಡೆದ ಶೂಟೌಟ್‌ನಲ್ಲಿ ಮಲೇಷ್ಯಾ ವಿರುದ್ಧ ೨-೧ಗೋಲುಗಳ ಅಂತರದಲ್ಲಿ ಜಯ ಗಳಿಸುವ ಮೂಲಕ ಪ್ರವೇಶಕ್ಕೆ ಅರ್ಹತೆ ಪಡೆದಿತ್ತು.  ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ ೧-೪ ಗೋಲುಗಳ ಅಂತರದಲ್ಲಿ ಸೋಲನುಭವಿಸಿ ರನ್ನರ್ ಅಪ್‌ಗೆ ತೃಪ್ತಿ ಪಟ್ಟ  ಭಾರತ ಮಹಿಳಾ ತಂಡವೂ ಅರ್ಹತೆ ಹೊಂದಿತ್ತು.
ಎಫ್ ಐ ಎ ಚ್  ೧೨ ಮಹಿಳಾ ಹಾಗೂ ೧೨ ಪುರುಷರ ತಂಡವನ್ನು ಅಂತಿಮಗೊಳಿಸಿದೆ. ಪುರುಷರ ತಂಡವು ೨೦೧೪ರಲ್ಲಿ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಆಸ್ಟ್ರೇಲಿಯಾದ ವಿರುದ್ಧ ಕಠಿಣ ಸವಾಲನ್ನು ಎದುರಿಸಲಿದೆ. ಜತೆಯಲ್ಲಿ ರನ್ನರ್ ಅಪ್ ಕೆನಡಾ, ಆತಿಥೇಯ ಅರ್ಜೆಂಟೀನಾ, ಆಸ್ಟ್ರಿಯಾ, ಬಾಂಗ್ಲಾದೇಶ್, ಪೋಲೆಂಡ್, ಮೆಕ್ಸಿಕೊ, ಮಲೇಷ್ಯಾ, ಕೀನ್ಯಾ, ಜಾಂಬಿಯಾ ಮತ್ತು ಒಔಟು ವಿರುದ್ಧ ಸೆಣಸಲಿದೆ.
ಭಾರತ ಮಹಿಳಾ ತಂಡವೂ ಕಠಿಣ ಸವಾಲನ್ನು ಎದುರಿಸಲಿದೆ. ೨೦೧೪ರ ಯೂತ್ ಒಲಿಂಪಿಕ್ಸ್ ಚಾಂಪಿಯನ್ ಚೀನಾ, ಆತಿಥೇಯ ಅರ್ಜೆಂಟೀನಾ, ಆಸ್ಟ್ರಿಯಾ, ಪೋಲೆಂಡ್,ಉರುಗ್ವೆ, ಮೆಕ್ಸಿಕೊ, ಆಸ್ಟ್ರೇಲಿಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಒನೌಟು ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಇತರ ೧೧ ತಂಡಗಳು.

Related Articles