Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೀ-ಟೂ ಅಭಿಯಾನಕ್ಕೆ ವಿನೇಶ್ ಪೊಗಟ್ ಬೆಂಬಲ

ಭುವನೇಶ್ವರ:

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಸಂಬಂಧ ಮೀ-ಟೂ ಅಭಿಯಾನಕ್ಕೆ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಪೊಗಾಟ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ಲೈಂಗಿಕ ಕಿರುಕುಳದಂಥ ಕಹಿ ಅನುಭವ ಆಗಿಲ್ಲ. ಕುಸ್ತಿ ಕ್ರೀಡೆಯಲ್ಲಿ ಮಹಿಳೆಯರ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಇಂದಿಗೂ ನಡೆದಿಲ್ಲ. ಮುಂದೆಯೂ ಸಂಭವಿಸುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ಹೇಳಿದರು. ದೇಶ ಪ್ರತಿನಿಧಿಸಬೇಕೆಂಬ ಹಂಬಲದೊಂದಿಗೆ ಕ್ರೀಡಾ ಜೀವನಕ್ಕೆ ಬರುವ ಮಹಿಳೆಯರಿಗೆ ಇಂತಹ ಅನುಭವಗಳಾದ ಭಯಭೀತರಾಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಆ ಮಹಿಳೆ ಮನೆಯಲ್ಲಿಯೂ ಹೇಳಲು ಹಿಂಜರಿಯಬಹುದು.

ಏಕೆಂದರೆ, ಮನೆಯವರು ಸಂಪೂರ್ಣವಾಗಿ ಕ್ರೀಡೆಯಿಂದ ಹೊರಬರುವಂತೆ ಹೇಳಬಹುದು ಎಂಬ ಭಯದಲ್ಲಿ ಲೈಂಗಿಕ ಕಿರುಕುಳ ಸನ್ನಿವೇಶಗಳನ್ನು ಯಾರಲ್ಲಿ ಹೇಳಲು ಬಯಸುವುದಿಲ್ಲ. ಆದರೆ, ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ಕಿರುಕುಳ ಹೇಳಿಕೊಳ್ಳಲು ಮೀ-ಟೂ ಅಭಿಯಾನ ಉತ್ತಮ ವೇದಿಕೆ ಎಂದರು.


administrator