ದೆಹಲಿ:
ಭಾರತದ ಮಾಜಿ ಸ್ಪೋಟಕ ಬ್ಯಾಟ್ಸಮನ್ ವಿರೇಂದ್ರ ಸೆಹ್ವಾಗ್ ಅವರು ಐಪಿಎಲ್‍ನ ಪ್ರಾಂಚೈಸಿಯಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಭಾಗಿತ್ವದಿಂದ ಹೊರನಡೆದಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಸೆಹ್ವಾಗ್ ಸ್ಪಷ್ಟಪಡಿಸಿದ್ದಾರೆ.
ಎರಡು ಆವೃತ್ತಿಯಲ್ಲಿ ಪಂಜಾಬ್ ತಂಡದ ಪರ ಆಡಿದ್ದೆ. ಇನ್ನೂ ಮೂರು ಬಾರಿ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದೆ. ಪಂಜಾಬ್ ಇಲೆವೆನ್ ತಂಡದೊಂದಿಗೆ ಕಳೆದ ಸಮಯ ಅದ್ಬುತವಾದದು. ತಂಡ ಮುಂದಿನ ಆವೃತ್ತಿಯಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಮಾಜಿ ಸ್ಪೋಟಕ ಬ್ಯಾಟ್ಸಮನ್ ಹಾರೈಸಿದರು. ಬಾಲಿವುಡ್ ನಟಿ ಪ್ರೀತಿ ಜಿಂಟಾ ಪಂಜಾಬ್ ತಂಡದ ಪಾಲುದಾರರಾಗಿರುತ್ತಾರೆ.