ಸ್ಪೋರ್ಟ್ಸ್ ಮೇಲ್ ವರದಿ: ಕೊರೋನಾ ಮಾರಿ ದೂರವಾಗುತ್ತಿದ್ದಂತೆ ಯುವಕರಲ್ಲಿ ಉತ್ಸಾಹ ಮನೆ ಮಾಡಿದೆ. ಕ್ರೀಡಾ ಚಟುವಟಿಕೆಗಳು ಮತ್ತೆ ಆರಂಭಗೊಂಡಿದೆ. ಕರಾವಳಿಯ ನೆಲದಲ್ಲಿ ಎಂದಿನಂತೆ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳ ಹಬ್ಬ ಜಗಮಗಿಸತೊಡಗಿದೆ.
ಕಳೆದ ನಾಲ್ಕು ಮೂರು ವರ್ಷಗಳಿದ ಅಂಕದಕಟ್ಟೆ ಟ್ರೋಫಿಯನ್ನು ನಡೆಸಿಕೊಂಡು ಬರುತ್ತಿದ್ದ ಕುಂದಾಪುರದ ಅಂಕದಕಟ್ಟೆಯ ಜೆ.ಕೆ. ಸ್ಪೋರ್ಟ್ಸ್ ಕ್ಲಬ್ (ರಿ) ಇವರು ಈ ಬಾರಿಯೂ ಇದೇ ತಿಂಗಳ 27 ಮತ್ತು 28ರಂದು 39 ಗಜಗಳ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದ್ದಾರೆ.
5 ಓವರ್ ಗಳ ಪಂದ್ಯವಾಗಿದ್ದು, 24 ತಂಡಗಳು ಪಾಲ್ಗೊಳ್ಳಲಿವೆ. ಚಾಂಪಿಯನ್ ತಂಡ ಆಕರ್ಷಕ ಟ್ರೋಫಿಯೊಂದಿಗೆ 20,000 ರೂ, ನಗದು ಬಹುಮಾನ ಗೆಲ್ಲಲಿದೆ. ರನ್ನರ್ ಅಪ್ ತಂಡ ಶಾಶ್ವತ ಫಲಕ ಹಾಗೂ 15,000 ರೂ. ನಗದು ಬಹುಮಾನ ಗೆಲ್ಲಲಿದೆ. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಪ್ರಶಸ್ತಿ ನೀಡಲಾಗುವುದು. ಸೆಮಿಫೈನಲ್ ಸೋಲ ತಂಡಗಳಿಗೆ ವಿಶೇಷ ಪುರಸ್ಕಾರವಿರುತ್ತದೆ.
ಪ್ರವೇಶ ಶುಲ್ಕ: ರೂ. 2,000
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9901517984, 7019385803, 9606517446, 9964633862, 9353795844