Thursday, September 12, 2024

ರೆತಿನ್, ಅಮೋದಿನಿ ಚಾಂಪಿಯನ್ಸ್

ಸ್ಪೋರ್ಟ್ಸ್ ಮೇಲ್ ವರದಿ

ಅಮೋಘ ಸ್ಪೋರ್ಟ್ಸ್ ಟೆನಿಸ್ ಅಕಾಡೆಮಿ ಆಶ್ರಯದಲ್ಲಿ ಅರಮನೆ ಮೈದಾನದಲ್ಲಿ ನಡೆದ ಎಐಟಿಎ-ಅಂಡರ್ 16 ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕಿತ ರೆತಿನ್ ಪ್ರಣವ್ ,ಹಾಗೂ ಅಮೋದಿನಿ ವಿಜಯ್ ಅನುಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ರೆತಿನ್ 2-6, 6-2, 6-0 ಅಂತರದಲ್ಲಿ ಶಿವರಾಜ್ ಚಂದನ್ ವಿರುದ್ಧ ಜಯ ಗಳಿಸಿದರೆ, ಅಮೋದಿನಿ 6-4, 5-7, 6-1 ಅಂತರದಲ್ಲಿ ವಿನಯ ಶ್ರೀವಾಸ್ತವ್ ವಿರುದ್ಧ ಫೈನಲ್ ಪಂದ್ಯದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು

14 ವರ್ಷದ ಅಮೋದಿನಿಗೆ ಸುಲಭವಾಗಿ ಜಯ ಗಳಿಸಬಹುದಾಗಿತ್ತು, ಆದರೆ ವಿನಯ ಎರಡನೇ ಸೆಟ್ ನಲ್ಲಿ ದಿಟ್ಟ ಹೋರಾಟ ನೀಡಿದುದರ ಪರಿಣಾಮ ಪ್ರಯಾಸದ ಜಯ ಕಾಣಬೇಕಾಯಿತು. ಎರಡನೇ ಸೆಟ್ ನಲ್ಲಿ ಅಮೋದಿನಿ 5-2 ಅಂತರದಲ್ಲಿ ಮುನ್ನಡೆ ಕಂಡು ಜಯ ಗಳಿಸುವ ಸನಿಹದಲ್ಲಿದ್ದರು, ಆದರೆ ವಿನಯ್ ಅವರನ್ನು ಮ್ಯಾಚ್ ಪಾಯಿಂಟ್ ನಲ್ಲೇ ತಡೆಹಿಡಿದು 7-5 ಅಂತರದಲ್ಲಿ ಸೆಟ್ ಗೆದ್ದುಕೊಂಡರು. ಆದರೆ ಅಮೋದಿನಿ ಮೂರನೇ ಸೆಟ್ ನಲ್ಲಿ 6-1 ಅಂತರದಲ್ಲಿ ಸೆಟ್ ಗೆದ್ದುಕೊಂಡು ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

Related Articles