sportsmail
ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಕುಂದಾಪುರ ಇವರ ಆಶ್ರಯದಲ್ಲಿ ಡಿ, 25ರಂದು ಕುಂದಾಪುರದ ಗಾಂಧಿ ಮೈದಾನಲ್ಲಿ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ.
ಯುವಕ ಮತ್ತು ಯುವತಿಯರ ವಿಭಾಗದಲ್ಲಿ ನಡೆಯಲಿರುವ ಈ ಚಾಂಪಿಯನ್ಷಿಪ್‌ಗೆ ಕುಂದಾಪುರ ಯುವಜನ ಸೇವಾ ಕ್ರೀಡಾ ಅಧಿಕಾರಿ ಕುಸುಮಾಕರ ಶೆಟ್ಟಿ ಅವರು ಶನಿವಾರ ಬೆಳಿಗ್ಗೆ 9 ಗಂಟೆಗೆ ಚಾಲನೆ ನೀಡಲಿದ್ದಾರೆ. ಕುಂದಾಪುರ ವಾಲಿಬಾಲ್ ಕ್ಲಬ್‌ವ ಅಧ್ಯಕ್ಷ ರಮಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಶೆಟ್ಟಿ ಐಸ್ ಪ್ಲಾಂಟ್‌ನ ರಂಜಿತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಹಿಳಾ ವಿಭಾಗದ ಚಾಂಪಿಯನ್ಷಿಪ್‌ಗೆ ಉಡುಪಿಯ ಮಂಜುನಾಥ ಕಣ್ಣಿನ ಆಸ್ಪತ್ರೆಯ ಡಾ. ಶಕೀಲಾ ಅವರು ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಸಹನಾ ಕನ್ವೆನ್ಷನ್ ಸೆಂಟರ್ ಅಂಕದಕಟ್ಟೆ ಇದರ ಮಾಲೀಕರಾದ ಸುರೇಂದ್ರ ಶೆಟ್ಟಿ ಅವರು ಪಾಲ್ಗೊಳ್ಳವರು.
ಸಂಜೆ ನಡೆಯುವ ಮಹಿಳಾ ತಂಡದ ಬಹುಮಾನ ವಿತರಣೆಯನ್ನು AIIMS ಹೈದರಾಬಾದ್ ಇದರ ಎಂಡಿ, ಡಾ. ರಶ್ಮಿ ಕುಂದಾಪುರ ಅವರು ನೆರವೇರಿಸಿಕೊಡುವರು. ಮುಖ್ಯ ಅತಿಥಿಗಳಾಗಿ ಬಿ.ಬಿ. ಹೆಗ್ಡೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲೋನಾ ಲೂಯಿಸ್ ಅವರು ಪಾಲ್ಗೊಳ್ಳುವರು.
ಪುರುಷರ ವಿಭಾಗದ ಬಹುಮಾನ ವಿತರಣೆ ಸಮಾರಂಭದಲ್ಲಿ ಸಹನಾ ಕನ್ವೆನ್ಷನ್ ಸೆಂಟರ್ ಇದರ ಮಾಲೀಕರಾದ ಸುರೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅರ್ಜುನ್ ತೋಳಾರ್ ಕುಂದಾಪುರ, ಹಂಸರಾಜ್ ಶೆಟ್ಟಿ, ಕಿರೀಟ್ ಶೆಟ್ಟಿ ಹಾಜರಿರುವರು.