Saturday, December 9, 2023

ಭಾರತಕ್ಕೆ ಆರಂಭದಲ್ಲೇ ಆಘಾತ

ಲಂಡನ್:ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ  ಭಾರತ ಆರಂ‘ದಲ್ಲೇ ಆಘಾತ ಅನುಭವಿಸಿದೆ. ಮೊದಲ ದಿನ ಮಳೆಗೆ ಆಹುತಿಯಾದ ನಂತರ ಎರಡನೇ ದಿನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾದಾಗ  ಭಾರತ 15 ರನ್ ಗಳಿಸುವಷ್ಟರಲ್ಲೇ ಅಮೂಲ್ಯ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮುರಳಿ ವಿಜಯ (೦) ಖಾತೆ ತೆರೆಯದೆ ಪೆವಿಲಿಯನ್ ಸೇರಿದರೆ, ರಾಹುಲ್ ಕೇವಲ 8 ರನ್ ಗಳಿಸಿ ಮತ್ತೊಮ್ಮೆ ವೈಲ್ಯದ ಹಾದಿ ತುಳಿದರು. ಚೇತೇಶ್ವರ ಪೂಜಾರ 1 ರನ್ ಗಳಿಸಿ ರನೌಟ್‌ಗೆ ಬಲಿಯಾದರು. ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 6 ರನ್‌ಗೆ 2 ವಿಕೆಟ್ ಗಳಿಸಿ ತಂಡಕ್ಕೆ ಉತ್ತಮ ಆರಂಭಕಲ್ಪಿಸಿದರು. ವಿರಾಟ್ ಕೊಹ್ಲಿ 3 ರನ್ ಗಳಿಸಿದ್ದು ಈಗ ಮತ್ತೊಮ್ಮೆ ತಂಡ ಅವರನ್ನು ಆಧರಿಸಿದೆ.

Related Articles