Thursday, September 12, 2024

ಭಾರತಕ್ಕೆ 10 ವಿಕೆಟ್ ಜಯ, ವಿರಾಟ್ ಕೊಹ್ಲಿ ಪಡೆಗೆ ಸರಣಿ

ಏಜೆನ್ಸೀಸ್ ಹೈದರಾಬಾದ್

ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಸಾಧನೆ ಮಾಡುವುದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ  ಭಾರತ 10 ವಿಕೆಟ್‌ಗಳ ಸುಲಭ  ಜಯ ಗಳಿಸಿ ಸರಣಿ

ಗೆದ್ದುಕೊಂಡಿದೆ. ಇದರೊಂದಿಗೆ ಎರಡನೇ ಚೆಸ್ಟ್ ಪಂದ್ಯವೂ ಮೂರನೇ ದಿನದಲ್ಲಿ ಅಂತ್ಯಗೊಂಡಿತು.
ಮೊದಲ ಇನಿಂಗ್ಸ್‌ನಲ್ಲಿ 311 ರನ್‌ಗೆ ಆಲೌಟ್ ಆಗಿದ್ದ ವೆಸ್ಟ್‌ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ ಕೇವಲ 127 ರನ್‌ಗಳಿಗೆ ಸರ್ವ ಪತನ ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ 88ರನ್‌ಗೆ 6 ವಿಕೆಟ್ ಗಳಿಸಿದ್ದ ಉಮೇಶ್ ಯಾದವ್, ಎರಡನೇ ಇನಿಂಗ್ಸ್‌ನಲ್ಲಿ 45 ರನ್‌ಗೆ4 ವಿಕೆಟ್ ಗಳಿಸಿ ಐತಿಹಾಸಿಕ ಸಾಧನೆ ಮಾಡಿದರು.
ಮೊದಲ ಇನಿಂಗ್ಸ್‌ನಲ್ಲಿ 367 ರನ್ ಗಳಿಸಿದ್ದ ಭಾರತಕ್ಕೆ, ಜಯಕ್ಕಾಗಿ  72 ರನ್ ಗುರಿ ಲಭಿಸಿತ್ತು. ಕೆ.ಎಲ್. ರಾಹುಲ್ (ಅಜೇಯ 33) ಹಾಗೂ ಪ್ರಥ್ವಿ ಶಾ (ಅಜೇಯ 33) ನಿರಾಯಾಸವಾಗಿ ಗುರಿ ತಲುಪಿದರು. ಈ ಜಯದೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು. ಉಮೇಶ್ ಯಾದವ್ ನಿರೀಕ್ಷೆಯಂತೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪೃಥ್ವಿ ಶಾ ಸರಣಿ ಶ್ರೇಷ್ಠರೆನಿಸಿದರು.

Related Articles