ಲಂಡನ್:ಇಂಗ್ಲೆಂಡ್ ನ ವೇಗದ ದಾಳಿಗೆ ತತ್ತರಿಸಿದ ಭಾರತ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ಕೇವಲ 107 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ.
ವಿರಾಟ್ ಕೊಹ್ಲಿ (23) ಹಾಗೂ ಆರ್ ಅಶ್ವಿನ್ (29) ಅವರನ್ನು ಹೊರತುಪಡಿಸಿದರೆ ಇತರ ಆಟಗಾರರು ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 20 ರನ್ ಗೆ 5 ವಿಕೆಟ್ ಗಳಿಸಿ ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.