Thursday, October 10, 2024

ಕೊಹ್ಲಿಯ ಬ್ಯಾಟಿಂಗ್‌ ನೋಡಲು 58 ಕಿಮೀ ಸೈಕಲ್‌ ತುಳಿದ ಬಾಲಕ

ಕಾನ್ಪುರ: ವಿರಾಟ್‌ ಕೊಹ್ಲಿ ಹಾಗೂ ಕ್ರಿಕೆಟ್‌ ಬಗ್ಗೆ ಆ ಶಾಲಾ ಬಾಲಕನಿಗೆ ಎಷ್ಟು ಪ್ರೀತಿ ಮತ್ತು ಬದ್ಧತೆ ಇದೆ ಎಂದರೆ ಮನೆಯಿಂದ 58 ಕಿಮೀ  ದೂರದಲ್ಲಿರುವ ಕಾನ್ಪುರ ಗ್ರೀನ್‌ ಪಾರ್ಕ್‌ ಅಂಗಣಕ್ಕೆ ಸೈಕಲ್‌ ತುಳಿದುಕೊಂಡು ಬಂದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಾನೆ. 15 year old boy cycles from Unnao to Kanpur to watch Virat Kohli Batting.

15 ವರ್ಷ ಪ್ರಾಯದ ಶಾಲಾ ಬಾಲಕ ಕಾರ್ತಿಕೇಯ ಉನ್ನಾವೋ ನಿವಾಸಿ. ವಿರಾಟ್‌ ಕೊಹ್ಲಿಯ ಅಭಿಮಾನಿ. ಕಾನ್ಪುರದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಎರಡನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯ ಆಟವನ್ನು ನೋಡಬೇಕೆಂಬ ಹಂಬಲದಲ್ಲಿ ಕಾರ್ತಿಕೇಯ ಬೆಳಿಗ್ಗೆ 4 ಗಂಟೆಗೆ ಮನೆಯಿಂದ ಹೊರಟು 58 ಕಿಮೀ ಸೈಕಲ್‌ ತುಳಿದು ಗ್ರೀನ್‌ ಪಾರ್ಕ್‌ ಅಂಗಣವನ್ನು ತಲುಪಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಹೊರಟ ಕಾರ್ತಿಕೇಯ 11 ಗಂಟೆಗೆ ಕಾನ್ಪುರ ತಲುಪಿದ. ಆದರೆ ಕಾರ್ತಿಕೇಯನಿಗೆ ವಿರಾಟ್‌ ಕೊಹ್ಲಿಯ ಪಂದ್ಯ ವೀಕ್ಷಿಸಲು ಆಗಲಿಲ್ಲ. ಭಾರತ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿದೆ. ಅಲ್ಲದೆ ಮೊದಲ ದಿನ ಹೆಚ್ಚಿನ ಅವಧಿ ಮಳೆಗೆ ಬಲಿಯಾಯಿತು. ಎರನೇ ದಿನ ಮಧ್ಯಾಹ್ನ ಕಳೆದರೂ ಪಂದ್ಯ ಆರಂಭವಾಗಲಿಲ್ಲ.

Related Articles