Thursday, March 28, 2024

ಕೊಹ್ಲಿ ಸೋತರೂ, ಪೂಜಾರ ಬಿಡ!

ಏಜೆನ್ಸೀಸ್ ಸೌತ್‌ಹ್ಯಾಂಪ್ಟನ್ 

ಅವಕಾಶದ ಆಟದಲ್ಲಿ ಯಾರು ಯಾವಾಗ ಮಿಂಚುತ್ತಾರೆಂದು ಹೇಳಲಾಗದು. ಚೇತೇಶ್ವರ ಪೂಜಾರ ವಿದೇಶದ ನೆಲದಲ್ಲಿ ಉತ್ತಮವಾಗಿ ಆಡುತ್ತಿಲ್ಲ, ಅವರ ಬದಲಿಗೆ ಕೆ.ಎಲ್. ರಾಹುಲ್ ಉತ್ತಮ ಆಯ್ಕೆ ಎಂದು ಸಮರ್ಥಿಸಿಕೊಂಡವರೇ ಹೆಚ್ಚು. ಆದರೆ ಕೆ.ಎಲ್. ರಾಹುಲ್ ನಿರಂತರ ವೈಲ್ಯ ಕಂಡರೆ ಪೂಜಾರ ಪ್ರಮುಖ ಪಂದ್ಯದಲ್ಲಿ ತಂಡವೇ ವಿಲವಾದಾಗ ಶತಕ ಸಿಡಿಸಿ ರಕ್ಷಿಸಿದರು.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಚೇತೇಶ್ವರ ಪೂಜಾರ ಅಜೇಯ 132 ರನ್ ಗಳಿಸಿ ಕುಸಿದ ಭಾರತಕ್ಕೆ ನೆರವಾಗುವುದರೊಂದಿಗೆ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ 273 ರನ್ ಗಳಿಸಿ 27 ರನ್ ಮುನ್ನಡೆ ಕಂಡಿದೆ. ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನಲ್ಲಿ  ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ.
ಇಂಗ್ಲೆಂಡ್‌ನ ಪ್ರಥಮ ಇನಿಂಗ್ಸ್‌ನ 246 ರನ್‌ಗೆ ಉತ್ತರವಾಗಿ ಭಾರತದ ಆರಂಭ  ಉತ್ತಮವಾಗಿರಲಿಲ್ಲ.  ಕೊಹ್ಲಿ (46), ಕೆ.ಎಲ್. ರಾಹುಲ್ (19), ಧವನ್ (23) ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರುವುದರೊಂದಿಗೆ ಭಾರತ ಒಂದು ಹಂತದಲ್ಲಿ 195ರನ್‌ಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿತ್ತು, ಪೂಜಾರ ತಮ್ಮ ನೈಜ ಆಟ ಪ್ರದರ್ಶಿಸಿ ಅಜೇಯ 132 ರನ್ ಗಳಿಸುವುದರೊಂದಿಗೆ ಭಾರತ 273 ರನ್ ಗಳಿಸಿತು. ಇಂಗ್ಲೆಂಡ್ ಪರ ಮೊಯಿನ್‌ಅಲಿ 63 ರನ್‌ಗೆ 5 ವಿಕೆಟ್ ಗಳಿಸಿ ಭಾರತವನ್ನು ಕಟ್ಟಿಹಾಕಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾರ 15ನೇ ಶತಕ ಸಿಡಿಸಿದರು. ವಿದೇಶದ ನೆಲದಲ್ಲಿ 2013ರ ನಂತರ ಪೂಜಾರ ಅವರದ್ದು ಎರಡನೇ ಶತಕ. 355 ನಿಮಿಷಗಳ ಕಾಲ ಕ್ರೀಸಿನಲ್ಲಿದ್ದ ಪೂಜಾರ 257 ಎಸೆತಗಳನ್ನೆದುರಿಸಿ 16 ಬೌಂಡರಿ ನೆರವಿನಿಂದ ಔಟಾಗದೆ 132 ರನ್ ಗಳಿಸಿದರು. ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವಾಗುವುದರಿಂದ ಈ ಪಂದ್ಯ ಕುತೂಹಲದ ಘಟ್ಟ ತಲಪುವುದು ಸ್ಪಷ್ಟ.

Related Articles