ಸುರಾನಾ ಕಾಲೇಜಿಗೆ ಚಾಂಪಿನಯ್ ಪಟ್ಟ

0
560
ಸ್ಪೋರ್ಟ್ಸ್ ಮೇಲ್ ವರದಿ

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಪಿಯು ಕಾಲೇಜುಗಳ ಜೂಡೋ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಸುರಾನಾ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಸುರಾನಾ ಕಾಲೇಜಿನ ಸ್ಪರ್ಧಿಗಳು ಒಟ್ಟು ಏಳು ಚಿನ್ನದ ಪದಕ ಗೆದ್ದಿರುತ್ತಾರೆ. ಎಂ.ಜಿ.ಆಸಿಫ್  (66 ಕೆಜಿ), ಎಂ. ಮಲ್ಲಪ್ಪ (55 ಕೆಜಿ), ವಿವೇಕ್ (60ಕೆಜಿ), ಶಫಿ (81 ಕೆಜಿ), ಪ್ರವೀಣ್ (73 ಕೆಜಿ), ಧನುಷ್ (43 ಕೆಜಿ) ಮತ್ತು ಸಲ್ಮಾನ್ (50 ಕೆಜಿ) ಚಿನ್ನ ಗೆದ್ದ ಜುಡೋಕೊಗಳು.
ಈ ಎಲ್ಲ ವಿಜೇತರು ಚಿತ್ರದುರ್ಗದಲ್ಲಿ ನಡೆಯಲಿರುವ ಬೆಂಗಳೂರು ವಿಶ್ವವಿದ್ಯಾಲಯ ಅಂತರ್ ವಲಯ ಚಾಂಪಿಯನ್‌ಷಿಪ್‌ನಲ್ಲಿ ದಕ್ಷಿಣ ವಲಯ ಪಿಯು ತಂಡವನ್ನು ಪ್ರತಿನಿಧಿಸಲಿದ್ದಾರೆ.