Friday, April 19, 2024

ಭಾರತಕ್ಕೆ ಜಡೇಜಾ, ಹನುಮನಾಸರೆ

ಏಜೆನ್ಸೀಸ್ ಲಂಡನ್

ರವೀಂದ್ರ ಜಡೇಜಾ (86*) ಹಾಗೂ ಹನುಮ ವಿಹಾರಿ (56) ಅವರ ಅರ್ಧ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಕುಸಿದ ಭಾರತ ಅಂತಿಮ ಹಂತದಲ್ಲಿ ಚೇತರಿಸಿ ಪ್ರಥಮ ಇನಿಂಗ್ಸ್‌ನಲ್ಲಿ 292 ರನ್ ಗಳಿಸಿತು. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 40 ರನ್ ಮುನ್ನಡೆ ಕಂಡು ದ್ವಿತೀಯ ಇನಿಂಗ್ಸ್‌ನಲ್ಲಿ ಟೀ ವಿರಾಮಕ್ಕೆ ವಿಕೆಟ್  ನಷ್ಟವಿಲ್ಲದೆ 20 ರನ್ ಗಳಿಸಿದೆ.

207 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಚೊಚ್ಚಲ ಪಂದ್ಯವನ್ನಾಡಿದ ಹನುಮ ವಿಹಾರಿ 56 ರನ್ ಗಳಿಸಿ ಆಸರೆಯಾದರೆ. ಟೆಸ್ಟ್ ಕ್ರಿಕೆಟ್‌ನ ಆರಂಭಿಕ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಗೌರವಕ್ಕೂ ಪಾತ್ರರಾದರು. 124 ಎಸೆತಗಳನ್ನೆದುರಿಸಿದ ಹನುಮ ವಿಹಾರಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧ ಶತಕ ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು.
ಆಲ್ರೌಂಡರ್ ಜಡೇಜಾ ಅವರು ತಾಳ್ಮೆಯ ಆಟವಾಡದೇ ಇರುತ್ತಿದ್ದರೆ ಭಾರತ ಇನ್ನೂ ಹೆಚ್ಚು ರನ್‌ಗಳ ಅಂತರದಲ್ಲಿ ಹಿನ್ನಡೆ ಅನುಭವಿಸುತ್ತಿತ್ತು. ಜಡೇಜಾ 156 ಎಸೆತಗಳನ್ನೆದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 86 ರನ್ ಗಳಿಸಿ ಕೊನೆ ಹಂತದಲ್ಲಿ ಉತ್ತಮ ಜತೆಯಾಟವಾಡಿದರು. ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ (54ಕ್ಕೆ 2), ಬೆನ್ ಸ್ಟೋಕ್ಸ್ (56ಕ್ಕೆ 2) ಹಾಗೂ ಮೊಯಿನ್ ಅಲಿ (50ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 332 ರನ್‌ಗೆ ಆಲೌಟ್ ಆಗಿತ್ತು.

Related Articles