Saturday, October 12, 2024

ICC ODI world cup 2023 ಏಕದಿನ ವಿಶ್ವಕಪ್‌ ಕ್ರಿಕೆಟ್‌: ಅಹಮದಾಬಾದ್‌ನಲ್ಲಿ ಫೈನಲ್‌

ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ (ICC ODI Cricket world cup 2023) ವೇಳಾಪಟ್ಟಿಯು ಬಹುತೇಕ ಅಂತಿಮಗೊಂಡಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲೂ ಪಂದ್ಯಗಳು ನಡೆಯಲಿದ್ದು ಫೈನಲ್‌ ಪಂದ್ಯ ನಿರೀಕ್ಷೆಯಂತೆ ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Nrendra Modi Stadium) ನಡೆಯಲಿದೆ.

ಅಕ್ಟೋಬರ್‌ 5 ರಿಂದ ಆರಂಭಗೊಳ್ಳಲಿರುವ ಪಂದ್ಯ ನವೆಂಬರ್‌ 19 ರವರೆಗೆ ನಡೆಯಲಿದೆ. 10 ತಂಡಗಳ ನಡುವಿನ ಈ ಕ್ರಿಕೆಟ್‌ ಹಬ್ಬ ಭಾರತದ ಒಟ್ಟು 12 ಕ್ರೀಡಾಂಗಣಳಲ್ಲಿ ನಡೆಯಲಿದೆ. ಬೆಂಗಳೂರು, ಚೆನ್ನೈ, ದಿಲ್ಲಿ, ಧರ್ಮಶಾಲಾ, ಗುಹಾವತಿ, ಹೈದರಾಬಾದ್‌, ಕೋಲ್ಕೊತಾ, ಲಖನೌ, ಇಂದೋರ್‌ ರಾಜ್‌ಕೋಟ್ ಮತ್ತು ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ ಎಂದು ತಿಳಿದುಬಂದಿದೆ. ಒಟ್ಟು 46 ದಿನಗಳ ಕಾಲ ಪಂದ್ಯಗಳು ನಡೆಯಲಿವೆ.

ಆದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈ ಬಾರಿ ಎರಡು ಪ್ರಮುಖ ವಿಷಯಗಳ ಬಗ್ಗೆ ಭಾರತ ಸರಕಾರದೊಂದಿಗೆ ಗ್ರೀನ್‌ ಸಿಗ್ನಲ್‌ ಪಡೆದುಕೊಳ್ಳಬೇಕಾಗಿದೆ. ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ಹಾಗೂ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಕುರಿತು ಸರಕಾರದ ಅಂತಿಮ ತೀರ್ಮಾನ ಪ್ರಕಟಿಸುವುದು. ಈ ಎರಡು ಕೆಲಸಗಳಲ್ಲಿ ಮೊದಲ ಕೆಲಸ ಬಿಸಿಸಿಐಗೆ ಸುಲಭವಾಗಲಿದೆ. ಏಕೆಂದರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಗ ಬಿಸಿಸಿಐ ಕಾರ್ಯದರ್ಶಿಯಾಗಿರುವುದು. 2013ರಿಂದ ಭಾರದಲ್ಲಿ ನಡೆದ ಯಾವುದೇ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳುತ್ತಿಲ್ಲ.

ಇತ್ತೀಚಿನ ವರದಿಗಳ ಪ್ರಕಾರ ಭಾರತ ಸರಕಾರದಿಂದ ಪಾಕಿಸ್ತಾನ ಆಟಗಾರರಿಗೆ ವೀಸಾ ನೀಡುವ ಕುರಿತು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಮತ್ತು ಅದಕ್ಕೆ ಪೂರಕವಾದ ನೆರವು ನೀಡಲಾಗುದು, ಭಾರತದ ನೆಲದಲ್ಲಿ ಪಾಕಿಸ್ತಾನಕ್ಕೆ ಆಡುವ ಅವಕಾಶ ಕಲ್ಪಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಹೇಳಿದೆ.

ಆದರೆ ಪಾಕಿಸ್ತಾನ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ (ICC ODI world cup 2023) ಪಾಲ್ಗೊಳ್ಳಲು ನಿರಾಕರಿಸಿದೆ. ಇದಕ್ಕೆ ಭಾರತ ತಂಡ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದೇ ಕಾರಣ. ಕುತೂಹಲದ ಸಂಗತಿ ಎಂದರೆ ಬಿಸಿಸಿಐ ಹಾಗೂ ಐಸಿಸಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಲೇ ಬೇಕು. ಹಾಗೆ ಈ ಎರಡು ತಂಡಗಳ ನಡುವೆ ಪಂದ್ಯ ಇಲ್ಲವೆಂದರೆ ಕ್ರಿಕೆಟ್‌ ವಿಶ್ವಕಪ್‌ ನೀರಸ. ಆದ್ದರಿಂದ ಐಸಿಸಿ ಮತ್ತು ಬಿಸಿಸಿಐ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕರೆತರಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿವೆ.

ಇದನ್ನೂ ಓದಿ : Royal Challengers Women : ಈ ಬಾರಿಯೂ ನಮಗಿಲ್ಲ ಕಪ್‌ : ಸೋಲಿನೊಂದಿಗೆ WPL ಅಭಿಯಾನ ಮುಗಿಸಿದ ಆರ್‌ಸಿಬಿ

ಇದನ್ನೂ ಓದಿ : BTR Shield cricket tournament: ಒಂದೇ ಪಂದ್ಯದಲ್ಲಿ ಶಾಹಾನ್ ಶತಕ ಮತ್ತು 10 ವಿಕೆಟ್!

Related Articles