Friday, October 4, 2024

Royal Challengers Women : ಈ ಬಾರಿಯೂ ನಮಗಿಲ್ಲ ಕಪ್‌ : ಸೋಲಿನೊಂದಿಗೆ WPL ಅಭಿಯಾನ ಮುಗಿಸಿದ ಆರ್‌ಸಿಬಿ

ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League 2023 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Women) ಕೊನೆಗೂ ಸೋಲು ಕಂಡಿದೆ. ಈ ಮೂಲಕ ಸ್ಮೃತಿ ಮಂಧನ ನೇತೃತ್ವದ ತಂಡ ಸೋಲಿನೊಂದಿಗೆ ಅಭಿಯಾನವನ್ನು ಅಂತ್ಯಗೊಳಿಸಿದೆ.

ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಸ್ಮೃತಿ ಮಂಧನ ಸಾರಥ್ಯದ ರಾಯಲ್ ಚಾಲೆಂಜರ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್’ಗಳ ಸೋಲು ಕಂಡಿತು. ಕೊನೆಯ ಪಂದ್ಯದಲ್ಲಾದ್ರೂ ಗೆಲ್ಲಬಹುದು ಅನ್ನೋ ನಿರೀಕ್ಷೆಯಲ್ಲಿದ್ದ ಬೆಂಗಳೂರಿನ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 16.3 ಓವರ್’ಗಳಲ್ಲಿ 6 ವಿಕೆಟ್ ಒಪ್ಪಿಸಿ 129 ರನ್ ಗಳಿಸಿ ಲೀಗ್’ನಲ್ಲಿ 6ನೇ ಗೆಲುವು ದಾಖಲಿಸಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಅಂಕ ಗಳಿಕೆ 12ಕ್ಕೇರಿದೆ.

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಒಟ್ಟು 6 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಕೇವಲ ಎರಡು ಪಂದ್ಯಗಳನ್ನು ಜಯಿಸುವ ಮೂಲಕ 4 ಅಂಕಗಳನ್ನು ಪಡೆದುಕೊಂಡಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಗುಜರಾತ್‌ ಜೈಂಟ್ಸ್‌ ತಂಡ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಇದನ್ನೂ ಓದಿ : ಬೈಕ್‌ನಲ್ಲೇ ಸಪ್ತ ಖಂಡಗಳ ಸುತ್ತಿದ ಕನ್ನಡಿಗ ದೀಪಕ್‌ ಕಾಮತ್‌

ಇದನ್ನೂ ಓದಿ : BTR Shield cricket tournament: ಒಂದೇ ಪಂದ್ಯದಲ್ಲಿ ಶಾಹಾನ್ ಶತಕ ಮತ್ತು 10 ವಿಕೆಟ್!

WPL-2023 ಟೂರ್ನಿಯಲ್ಲಿ ಬೆಂಗಳೂರು ತಂಡದ (Royal Challengers Women) ಫಲಿತಾಂಶ

ಮೊದಲ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ ಸೋಲು
2ನೇ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ ಸೋಲು
3ನೇ ಪಂದ್ಯ: ಗುಜರಾತ್ ಜೈಂಟ್ಸ್ ವಿರುದ್ಧ 11 ರನ್ ಸೋಲು
4ನೇ ಪಂದ್ಯ: ಯು.ಪಿ ವಾರಿಯರ್ಸ್ ವಿರುದ್ಧ 10 ವಿಕೆಟ್ ಸೋಲು ಸೋಲು
5ನೇ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಸೋಲು
6ನೇ ಪಂದ್ಯ: ಯು.ಪಿ ವಾರಿಯರ್ಸ್ ವಿರುದ್ಧ 5 ವಿಕೆಟ್ ಗೆಲುವು
7ನೇ ಪಂದ್ಯ: ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ ಗೆಲುವು
8ನೇ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಸೋಲು

Related Articles