Saturday, October 5, 2024

BTR Shield cricket tournament: ಒಂದೇ ಪಂದ್ಯದಲ್ಲಿ ಶಾಹಾನ್ ಶತಕ ಮತ್ತು 10 ವಿಕೆಟ್!

ಬೆಂಗಳೂರು: ಪಂದ್ಯವೊಂದರಲ್ಲಿ ಎಲ್ಲ 10 ವಿಕೆಟ್ ಗಳಿಸಿದ ಕನ್ನಡಿಗ ಅನಿಲ್ ಕುಂಬ್ಳೆ, ಜೇಮ್ಸ್ ಚಾರ್ಲ್ಸ್ ಲೇಕರ್ ಮತ್ತು ಅಜಾಜ್ ಪಟೇಲ್ ನಮ್ಮ ನೆನಪಿನಂಗಳದಲ್ಲಿ ಹಸಿರಾಗಿಯೇ ಉಳಿದಿದ್ದಾರೆ. ಆದರೆ ಒಂದೇ ಪಂದ್ಯದಲ್ಲಿ 115 ರನ್ ಗಳಿಸಿ ಎದುರಾಳಿ ತಂಡದ ಎಲ್ಲ 10 ವಿಕೆಟ್ಗಳನ್ನು ಗಳಿಸಿ ಅಪೂರ್ವ ದಾಖಲೆಯೊಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 14 ವರ್ಷ ವಯೋಮಿತಿಯ ಆಟಗಾರರಿಗಾಗಿ ನಡೆಸುತ್ತಿರುವ ಬಿಟಿಆರ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ (BTR Shield cricket tournament) ಸಂಭವಿಸಿದೆ.

ಶ್ರೀ ರಾಮ್ ಗ್ಲೋಬಲ್ ಸ್ಕೂಲ್ (Sri Ram Global School) ಮತ್ತು ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್ ನಡುವಿನ ಪಂದ್ಯದಲ್ಲಿ ಶ್ರೀರಾಮ್ ಗ್ಲೋಬಲ್ ಸ್ಕೂಲ್ನ ಶಾಹಾನ್ (Shahan)115 ರನ್ ಗಳಿಸಿ ಬಳಿಕ ಬೌಲಿಂಗ್ನಲ್ಲಿ ಕೇವಲ 8 ರನ್ಗೆ 10 ವಿಕೆಟ್ ಗಳಿಸಿ ಅಪೂರ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ (BTR Shield cricket tournament).

88 ಎಸೆತಗಳನ್ನು ಎದುರಿಸಿದ ಶಾಹಾನ್ 23 ಬೌಂಡರಿಗಳ ನೆರವಿನಿಂದ 115 ರನ್ ಸಿಡಿಸುವುದರೊಂದಿಗೆ ಶ್ರೀರಾಮ್ ಗ್ಲೋಬಲ್ ಸ್ಕೂಲ್ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್ ಕೇವಲ 7 ಓವರ್ಗಳಲ್ಲಿ 14 ರನ್ಗೆ ಸರ್ವ ಪತನ ಕಂಡಿತು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಶಾಹಾನ್ ಬೌಲಿಂಗ್ನಲ್ಲೂ 8 ರನ್ಗೆ ಎಲ್ಲ 10 ವಿಕೆಟ್ ಕಬಳಿಸುವ ಮೂಲಕ ಶ್ರೀರಾಮ್ ತಂಡ 385 ರನ್ಗಳ ಬೃಹತ್ ಜಯ ಕಂಡಿತು.

ದಿನದ ಇನ್ನೊಂದು ಪಂದ್ಯದಲ್ಲಿ ವೈಟ್ಫೀಲ್ಡ್ನ ಯೂರೊ ಸ್ಕೂಲ್ ವೈಟ್ಫೀಲ್ಡ್ನ ಗ್ಲೋಬಲ್ ಸ್ಕೂಲ್ ವಿರುದ್ಧ 44 ರನ್ಗಳ ಜಯ ಗಳಿಸಿತು. ವಿಎಸ್ಎಸ್ ಇಂಟರ್ನ್ಯಾಷನಲ್ ಸ್ಕೂಲ್ 158 ರನ್ಗಳ ಅಂತರದಲ್ಲಿ ವ್ಯಾಸ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಜಯ ಗಳಿಸಿತು. ಸಿದ್ಧಗಂಗಾ ಸ್ಕೂಲ್ ವಿರುದ್ಧ ಸುದರ್ಶನ್ ವಿದ್ಯಾ ಮಂದಿರ್ ಸ್ಕೂಲ್ 3 ವಿಕೆಟ್ಗಳ ಜಯ ಗಳಿಸಿತು. ವೈಟ್ಫೀಲ್ಡ್ನ ಡೆಲ್ಲಿ ಪಬ್ಲಿಕ್ ಸ್ಕೂಲ್ ಕ್ರಿಸಾಲೀಸ್ ಹೈಸ್ಕೂಲ್ ವಿರುದ್ಧ 9 ವಿಕೆಟ್ ಅಂತರದಲ್ಲಿ ಜಯ ಗಳಿಸಿತು.

ದಿ ಸ್ಪೊರ್ಟ್ಸ್ ಸ್ಕೂಲ್ ತಂಡವು ಗೋಪಾಲನ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ 9 ರನ್ಗಳ ರೋಚಕ ಜಯ ಗಳಿಸಿತು. ಫೆಡರಲ್ ಪಬ್ಲಿಕ್ ಸ್ಕೂಲ್ ತಂಡವು ಎಸ್ಎಫ್ಎಸ್ ಅಕಾಡೆಮಿ ವಿರುದ್ಧ 4 ವಿಕೆಟ್ ಅಂತರದಲ್ಲಿ ಜಯ ಗಳಿಸಿತು.

ಇದನ್ನೂ ಓದಿ : Tulunadu Cricket League: ಅನಿವಾಸಿ ಕನ್ನಡಿಗರ ಕ್ರಿಕೆಟ್‌ ಹಬ್ಬ: ತುಳುನಾಡು ಕ್ರಿಕೆಟ್‌ ಲೀಗ್‌

Related Articles