Sunday, May 26, 2024

ಭಾರತ ಹಾಕಿ ತಂಡ ಪ್ರಕಟ : ಸುನಿಲ್, ರೂಪಿಂದರ್ ಔಟ್

ದೆಹಲಿ: 

ಇದೇ 28ರಿಂದ ಭುವನೇಶ್ವರಲ್ಲಿ ಆರಂಭವಾಗಲಿರುವ ಹಾಕಿ ವಿಶ್ವ ಕಪ್‌ಗೆ ಭಾರತದ 18 ಆಟಗಾರರ ತಂಡ ಪ್ರಕಟವಾಗಿದ್ದು, ತಂಡವನ್ನು ಮನ್‌ಪ್ರೀತ್ ಮುನ್ನಡೆಸಲಿದ್ದಾರೆ.

ಅನುಭವಿ ಆಟಗಾರರಾದ ಸುನೀಲ್, ರಮನ್‌ದೀಪ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ಅವರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನವನ್ನು ಯುವ ಆಟರಾರರಾದ ನೀಲಕಂಠ ಶರ್ಮಾ ಮತ್ತು ಹಾರ್ದಿಕ್ ಸಿಂಗ್ ಅವರು ತುಂಬಲಿದ್ದಾರೆ.ಗೋಲ್ ಕೀಪರ್ ಸ್ಥಾನವನ್ನು ಶ್ರೀಜೇಶ್ ಅಲಂಕರಿಸಿದರೆ, ಉಪನಾಯಕರಾಗಿ ಚಿಂಗ್ಲೆನ್ಸಾನಾ ಸಿಂಗ್ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ತಂಡ ಪೂಲ್ ‘ಸಿ’ನಲ್ಲಿದ್ದು, ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಹೋರಾಟ ನಡೆಸಲಿದೆ. ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಮೂರನೇ ಪಂದ್ಯದಲ್ಲಿ ಕೆನಡಾ ಎದುರು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.
ಐದನೇ ಆವೃತ್ತಿಯ ಏಷ್ಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡಕ್ಕೆ ಮನ್‌ಪ್ರೀತ್ ನಾಯಕರಾಗುವ ಮೂಲಕ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದರು. ತಂಡ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಜಂಟಿ ಗೆಲುವು ಸಾಧಿಸಿತ್ತು. ವಿಶ್ವಕಪ್‌ನಲ್ಲಿ ಇನ್ನೂ ಹೆಚ್ಚಿನ ಪ್ರದರ್ಶನ ತೋರಿ ಗೆಲುವು ಸಾಧಿಸುವ ತವಕದಲ್ಲಿದೆ.
ತಂಡದ ವಿವರ 
ಗೋಲ್ ಕೀಪರ್‌ಗಳು: ಪಿ.ಆರ್ ಶ್ರೀಜೇಶ್, ಕೃಷ್ಣ ಬಹದ್ದೂರ್ ಪಾಠಕ್ .
ಡಿಫೆಂಡರ್‌ಗಳು: ಹರ್ಮನ್‌ಪ್ರೀತ್ ಸಿಂಗ್, ಬಿರೇಂದರ್ ಲಾಕ್ರಾ, ವರುಣ್ ಕುಮಾರ್, ಕೊತ್ತಜೀತ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್
ಮಿಡ್‌ಫಿಲ್ಡರ್‌ಗಳು: ಮನ್‌ಪ್ರೀತ್ ಸಿಂಗ್(ನಾಯಕ), ಚಿಂಗ್ಲೆನ್ಸಾನಾ ಸಿಂಗ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಸುಮಿತ್
ಮುಂಚೂಣಿ ಆಟಗಾರರು: ಆಕಾಶ್‌ದೀಪ್ ಸಿಂಗ್, ಮನ್‌ದೀಪ್ ಸಿಂಗ್, ದಿಲ್ಪ್ರೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಯ, ಸಿಮ್ರಾನ್‌ಜೀತ್ ಸಿಂಗ್ 

Related Articles