ಅರ್ಜೆಂಟೀನಾ ಮಣಿಸಿ ಸೆಮಿಫೈನಲ್ ತಲುಪಿದ ಇಂಗ್ಲೆಂಡ್

0
201
ಭುವನೇಶ್ವರ:

ಅಮೋಘ ಆಟವಾಡಿದ ಇಂಗ್ಲೆೆಂಡ್ ತಂಡ ಪುರುಷರ 14ನೇ ಹಾಕಿ ವಿಶ್ವಕಪ್ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಸೋಲಿಸಿತು. ಆ ಮೂಲಕ ಮೂರನೇ ಬಾರಿ ನಾಲ್ಕರ ಘಟ್ಟಕ್ಕೆೆ ಲಗ್ಗೆೆ ಇಟ್ಟಿತು. ಇದರೊಂದಿಗೆ ಗೆದ್ದು ಸೆಮಿಫೈನಲ್ ತಲುಪಬೇಕೆಂಬ ಕನಸು ಕಂಡಿದ್ದ ಅರ್ಜೆಂಟೀನಾಗೆ ಇಂಗ್ಲೆೆಂಡ್ ಆಘಾತ ನೀಡಿತು.

ಇಲ್ಲಿ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಬರ್ರೆೆ ಮಿಡ್ಲಟನ್(27ನೇ ನಿ.), ವಿಲ್ ಕಾಲ್ನನ್(45ನೇ ನಿ.) ಹಾಗೂ ಹ್ಯಾಾರಿ ಮಾರ್ಟಿನ್(49ನೇ ನಿ.) ಇವರು ಗಳಿಸಿದ ಮೂರು ಗೋಲುಗಳ ನೆರವಿನಿಂದ ಇಂಗ್ಲೆೆಂಡ್ 3-2 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಸೆಮಿಫೈನಲ್‌ಗೆ ಪ್ರವೇಶ ಮಾಡಿತು.
ಅರ್ಜೆಂಟೀನಾ ತಂಡದ ಪರ ಗೊಂಜಲೊ ಪೆಲ್ಲಾಟ್ ಅವರು (17ನೇ ನಿ, ಹಾಗೂ 48ನೇ ನಿ.) ಎರಡು ಗೋಲುಗಳು ಗಳಿಸಿದರು. ಆದರೆ, ಅಂತಿಮವಾಗಿ ಇಂಗ್ಲೆೆಂಡ್ ಸಂಘಟಿತ ಹೋರಾಟಕ್ಕೆೆ ಮಣಿಯಿತು. ಅರ್ಜೆಂಟೀನಾ ತಂಡ 17ನೇ ನಿಮಿಷದಲ್ಲೆೆ ಗೋಲು ಗಳಿಸಿ ಮುನ್ನಡೆ ಪಡೆದಿತ್ತು. ಆದರೆ, ಇದರಿಂದ ಎಚ್ಚೆೆತ್ತುಕೊಂಡ ಇಂಗ್ಲೆೆಂಡ್ ತಂಡ ಆಕ್ರಮಣ ಆಟಕ್ಕೆೆ ಮೊರೆ ಹೋಯಿತು. ಅದರಂತೆ ಇಂಗ್ಲೆೆಂಡ್ ತಂಡದ ಆಟಗಾರರು ಚುರುಕಿನ ಆಟ ಪ್ರದರ್ಶನ ನೀಡುವ ಮೂಲಕ ಅರ್ಜೆಂಟೀನಾ ತಂಡವನ್ನು ಕಟ್ಟಿಹಾಕುವಲ್ಲಿ ಸಫಲವಾಯಿತು.