ಕೊಹ್ಲಿ ವಿರುದ್ಧ ಅಭಿಮಾನಿಗಳು ಆಕ್ರೋಶ

0
197
ದೆಹಲಿ:

ಸ್ವದೇಶಿ ಕ್ರಿಕೆಟೈಗರನ್ನು ಇಷ್ಟಪಡದವರು ದೇಶ ಬಿಟ್ಟು ಹೋಗಿ ಎಂದು ಹೇಳಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ವಿರಾಟ್ ಕೊಹ್ಲಿ ಅಫಿಷಿಯಲ್ ಆ್ಯಪ್ ಅನ್ನು ತಮ್ಮ 30 ನೇ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡುವ ವೇಳೆ ಸಾಕಷ್ಟು  ಅಭಿಮಾನಿಗಳು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರ ಪರವಾಗಿ ಪ್ರತಿಕ್ರಿಯೆ ನೀಡಿದ್ದರು. ವಿರಾಟ್ ಕೊಹ್ಲಿ  ಮತ್ತು  ಭಾರತದ ಬ್ಯಾಟ್ಸ್ ಮನ್ ಗಳಿಗಿಂತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಗಳ   ಬ್ಯಾಟಿಂಗ್ ತುಂಬಾ ಖುಷಿ ನೀಡುತ್ತದೆ ಎಂದು ಅಭಿಮಾನಿಗಳು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ವದೇಶಿ ಆಟಗಾರರನ್ನು ಬೆಂಬಲಿಸದವರು ದೇಶ ಬಿಡುವುದು ಒಳ್ಳೆಯದು ಎಂದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಾಯಕ ಕೊಹ್ಲಿ ಬಗ್ಗೆ  ಅಭಿಮಾನಿಗಳು ತೀವ್ರ ಆಕ್ರೋಶ   ವ್ಯಕ್ತಪಡಿಸಿದ್ದಾರೆ.