Saturday, July 20, 2024

ಭಾರತ ಭರ್ಜರಿ ಶುಭಾರಂಭ

ಭುವನೇಶ್ವರ:

ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ತಂಡ ಭಾರತ 14ನೇ ಆವೃತ್ತಿಯ ಹಾಕಿ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 5-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು.

 ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮನ್‌ಪ್ರೀತ್ ಪಡೆ ಅಮೋಘ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು. ವಿಶ್ವಾದಿಂದಲೇ ಮೈದಾನಕ್ಕೆೆ ಆಗಮಿಸಿದ ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಉತ್ತಮ ಆಟವಾಡುವ ಮೂಲಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಮನ ಗೆದ್ದಿತು.
ಪಂದ್ಯ ಆರಂಭದ ಮೊದಲ ಕ್ವಾರ್ಟರ್‌ನಲ್ಲಿ ಭಾರತ ಎರಡು ಗೋಲುಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. 10ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ತಂಡಕ್ಕೆೆ ಪ್ರಥಮ ಗೋಲನ್ನು ನೀಡಿದರೆ, 12 ನೇ ನಿಮಿಷದಲ್ಲಿ ಆಕಾಶ್ ದೀಪ್ ಎದುರಾಳಿ ಆಟಗಾರರ ದಿಕ್ಕು ತಪ್ಪಿಸಿ ಎರಡನೇ ಗೋಲನ್ನು ತಂಡಕ್ಕೆೆ ನೀಡುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ 2-0 ಮುನ್ನಡೆಯಾಯಿತು.
ದಕ್ಷಿಣ ಆಫ್ರಿಕಾದ ಆಟಗಾರಿಗೆ ಗೋಲು ಗಳಿಸಲು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಭಾರತ ಆಟಗಾರರು ತಮ್ಮ ಲಯ ಮುಂದುವರಿಸುವ ಮೂಲಕ 43ನೇ ನಿಮಿಷದಲ್ಲಿ ಸಿಮ್ರಾನ್‌ಜೀತ್ ಸಿಂಗ್ ಗೋಲು ಗಳಿಸುವಲ್ಲಿ ಸಫಲರಾದರು. ಇದರೊಂದಿಗೆ ಮನ್‌ಪ್ರೀತ್ ಬಳಗ 3-0 ಮುನ್ನಡೆಯಾಯಿತು.
ಮುಂಚೂಣಿ ಆಟಗಾರ ಲಲಿತ್ ಉಪಾಧ್ಯಾಯ ಉತ್ತಮ ಆಟವಾಡುವ ಮೂಲಕ 45ನೇ ನಿಮಿಷದಲ್ಲಿ ತಂಡಕ್ಕೆೆ ನಾಲ್ಕು ಗೋಲನ್ನು ನೀಡಿದರು. ಈ ಮೂಲಕ ಭಾರತ ಎದುರಾಳಿ ತಂಡದ ಎದುರು ನಾಲ್ಕು ಗೋಲುಗಳ ಮುನ್ನಡೆಯಾಯಿತು. ಆಫ್ರಿಕನ್ನರು ಗೋಲು ಗಳಿಸಲು ಆತಿಥೇಯ ಆಟಗಾರರ ಎದುರು ಎಷ್ಟೇ ಹೋರಾಟ ನಡೆಸಿದರೂ ಫಲ ದೊರೆಯಲಿಲ್ಲ.
ಸಿಮ್ರಾನ್ ಜೀತ್ 46ನೇ ನಿಮಿಷದಲ್ಲಿ ತಂಡಕ್ಕೆೆ ಮತ್ತೊಂದು ಗೋಲು ನೀಡಿದರು. ಆ ಮೂಲಕ ಭಾರತ 5-0 ಗೋಲುಗಳ ಮುನ್ನಡೆಯಾಗಿ ಗೆಲುವಿನ ನಗೆ ಬೀರಿತು.

Related Articles