ದೆಹಲಿ:
ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರೊಂದಿಗಿನ ವೃತ್ತಿ ಸಂಬಂಧ ಹದಗೆಟ್ಟಿರುವುದು ನಿಜ ಎಂದು ಒಪ್ಪಿಕೊಂಡಿರುವ ಭಾರತ ಮಹಿಳಾ ತಂಡದ ತರಬೇತುದಾರ ರಮೇಶ್ ಪೊವಾರ್, ಪಂದ್ಯದಲ್ಲಿ ರೂಪಿಸಿದ ತಂತ್ರದ ಅನುಸಾರ ಅವರನ್ನು ಇಂಗ್ಲೆೆಂಡ್ ವಿರುದ್ಧದ ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ತಂಡದ ಕೋಚ್ ರಮೇಶ್ ಪೊವಾರ್ ನನ್ನನ್ನು ಅವಮಾನಿಸಿದ್ದಾರೆಂದು ಮಿಥಾಲಿ ರಾಜ್ ಇಮೈಲ್ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಜೊರ್ಹಿ ಹಾಗೂ ಪ್ರಧಾನ ವ್ಯವಸ್ಥಾಪಕ ಸಬಾ ಕರಿಮ್ ಅವರ ಬಳಿ ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ರಮೆಶ್ ಪೊವಾರ್ ಮುಂಬೈನ ಮುಖ್ಯ ಕಚೇರಿಯಲ್ಲಿ ರಾಹುಲ್ ಜೊರ್ಹಿ ಹಾಗೂ ಕರಿಮ್ ಅವರನ್ನು ಭೇಟಿಯಾದರು.
ಮಿಥಾಲಿ ರಾಜ್ ಅವರಿಂದ ಕ್ಲಿಷ್ಟಕರ ಸನ್ನಿವೇಶ ನಿಭಾಯಿಸುವುದು ಕಷ್ಟ. ಇದನ್ನು ನಾನೇ ಪ್ರತ್ಯೇಕವಾಗಿ ಗಮನಿಸದ್ದೇನೆ. ತಂಡದ ಗೆಲುವಿಗಾಗಿ ರೂಪಿಸಿದ ತಂತ್ರದ ಅನುಸಾರವಾಗಿ ಅವರಿಗೆ ಇಂಗ್ಲೆೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಅಂತಿಮ ಹನ್ನೊಂದರಲ್ಲಿ ಅವಕಾಶ ನೀಡಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.