Sunday, September 8, 2024

ಭಾರತಕ್ಕೆೆ ಬೆಲ್ಜಿಯಂ ಸವಾಲು

ಭುವನೇಶ್ವರ:

 ದಕ್ಷಿಣ ಆಫ್ರಿಕಾ ವಿರುದ್ಧ  ಭರ್ಜರಿ ಗೆಲುವು ಸಾಧಿಸಿದ ಉತ್ಸಾಹದಲ್ಲಿರುವ ಭಾರತ ತಂಡ, ಇಂದು ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ ತಲುಪುವ ತುಡಿತದಲ್ಲಿದೆ.

ಪ್ರಸ್ತುತ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5-0 ಅಂತರದಲ್ಲಿ ಗೆದ್ದಿರುವ ಭಾರತ, 43 ವರ್ಷಗಳ ಹಿಂದಿನ ಇತಿಹಾಸವನ್ನು ಮರುಕಳಿಸುವ ಯೋಜನೆಯೊಂದಿಗೆ ಭರ್ಜರಿ ಆರಂಭ ಪಡೆದುಕೊಂಡಿದೆ. ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ತಂಡ ಬೆಲ್ಜಿಯಂ ತನ್ನ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 2-1 ಅಂತರದಲ್ಲಿ ಜಯಿಸಿತ್ತು. ಭಾರತಕ್ಕೆೆ ಹೋಲಿಕೆ ಮಾಡಿಕೊಂಡರೆ ಬೆಲ್ಜಿಯಂ ಅ ಷ್ಟೊಂದು  ಉತ್ತಮ ಆಟ ಪ್ರದರ್ಶನ ನೀಡಿಲ್ಲ.
ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಭಾರತ, 1975ರ ಘಟನೆಯನ್ನು ಮರುಕಳಿಸಲಿದೆಯೆ ಎಂದು ಕಾದು ನೋಡಬೇಕಿದೆ.
ಆಫ್ರಿಕಾ ವಿರುದ್ಧ ಮೊದಲ ಹಣಾಹಣಿಯಲ್ಲಿ ತೋರಿದ್ದ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ್ದೆೆ ಆದಲ್ಲಿ ಭಾರತ ಹಾದಿ ಸುಗಮವಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮುಂಚೂಣಿ ಆಟಗಾರರಾದ ಮಂದೀಪ್ ಸಿಂಗ್, ಸಿಮ್ರಾನ್‌ಜಿತ್ ಸಿಂಗ್, ಆಕಾಶ್‌ದೀಪ್ ಸಿಂಗ್ ಹಾಗೂ ಲಲಿತ್ ಉಪಾಧ್ಯಯ ಅವರು ಆಕರ್ಷಕ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಸಿಮ್ರಾನ್‌ಜಿತ್ ಎರಡು ಗೋಲು ಗಳಿಸಿದ್ದರು. ಇನ್ನುಳಿದ ಮೂವರು ತಲಾ ಒಂದೊಂದು ಗೋಲು ಗಳಿಸಿದ್ದರು.
ಮಿಡ್ ಫೀಲ್ಡಿಂಗ್ ವಿಭಾಗದ ಸಾರಥ್ಯ ವಹಿಸಿಕೊಂಡಿದ್ದ ಮನ್‌ಪ್ರೀತ್ ಸಿಂಗ್ ಸಮಯೋಜಿತ ಆಟವಾಡಿದ್ದರು. ಆದರೆ, ಹರ್ಮನ್‌ಪ್ರೀತ್ ಸಿಂಗ್, ಬಿರೇಂದ್ರ ಲಕ್ರಾಾ, ಸುರೇಂದ್ರ ಕುಮಾರ್ ಹಾಗೂ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಬೆಲ್ಜಿಯಂ ವಿರುದ್ಧ ಪುಟಿದೇಳುವ ಅಗತ್ಯವಿದೆ.
 ಈ ವರ್ಷದ ಆರಂಭದಲ್ಲಿ ಭಾರತ ಹಾಗೂ ಬೆಲ್ಜಿಯಂ ತಂಡಗಳು ಕೊನೆಯ ಪಂದ್ಯವನ್ನು ಚಾಂಪಿಯನ್ ಟ್ರೋಫಿ ಅಂತಿಮ ಹಂತದಲ್ಲಿ ಕಾದಾಟ ನಡೆಸಿದ್ದವು. ಆದರೆ,  ಉಭಯ ತಂಡಗಳು 1-1 ಡ್ರಾಾಗೆ ತೃಪ್ತಿಪಟ್ಟುಕೊಂಡಿದ್ದವು. ಆದರೆ, ವಿಶ್ವಕಪ್ ಅಭಿಯಾನದಲ್ಲಿ ಈ ಎರಡೂ ತಂಡಗಳು ಎಚ್ಚರಿಕೆಯಿಂದ ಸೆಣಸಲಿವೆ.

Related Articles