Wednesday, July 24, 2024

ಭುವನೇಶ್ವರ ದೇಶದ ಕ್ರೀಡಾ ರಾಜಧಾನಿ

ಮುಂಬೈ:

ಕಳೆದ ಐದು ವರ್ಷಗಳಿಂದ ಭಾರತದಲ್ಲಿ  ಕ್ರೀಡೆ ತುಂಬಾ ಬೆಳವಣಿಗೆಯಾಗಿದೆ ಎಂದು ಭಾರತದ ಮಾಜಿ ರಗ್ಬಿ ಆಟಗಾರ ಹಾಗೂ ನಟ ರಾಹುಲ್ ಬೋಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರೇಕಿಂಗ್ ಬ್ಯಾರಿಯರ್ಸ್ ಎಂಬ ಕಲಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಸಿಗದ ಕ್ರೀಡಾ ಸೌಲಭ್ಯಗಳು ಕಳೆದ ಐದು ವರ್ಷಗಳಿಂದ ದೊರೆಯುತ್ತಿವೆ. ಒಡಿಶಾದ ಭುವನೇಶ್ವರ ರಾಷ್ಟ್ರೀಯ ಕ್ರೀಡಾ ರಾಜಧಾನಿ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪಂಜಾಬ್‌ನ ಪಾಟಿಯಾಲದಲ್ಲಿರುವ ಎರಡರಿಂದ ಮೂರು ಬಾಕ್ಸಿಂಗ್  ಹಾಗೂ ಕುಸ್ತಿ ಅಕಾಡೆಮಿಗಳು ಅತ್ಯುತ್ತಮವಾಗಿವೆ. ಬೆಂಗಳೂರು ಹೊರವಲಯದಲ್ಲಿ ಜಿಂದಾಲ್ ಸ್ಟೀಲ್ ಹಾಗೂ ಪವರ್ ಕಂಪನಿ ಸ್ಥಾಪಿಸಿರುವ ಕ್ರೀಡಾ ಅಕಾಡೆಮಿ ಅದ್ಬುತವಾಗಿದೆ. ಇನ್ನು, 10 ರಿಂದ 15 ವರ್ಷಗಳಲ್ಲಿ ದೇಶದಲ್ಲಿ ಕ್ರೀಡಾ ಸೌಲಭ್ಯಗಳ ಕುರಿತು ಯಾರು ಪ್ರಶ್ನೆೆ ಮಾಡುವುದಿಲ್ಲ ಎಂದರು.

Related Articles