ದೆಹಲಿ:
ನಾಳೆಯಿಂದ ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗುವ ಮಹಿಳಾ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಸಂಭಾವ್ಯ ಆಟಗಾರ್ತಿಯರನ್ನು ಹಾಕಿ ಭಾರತ ಆಯ್ಕೆ ಮಾಡಿ ಘೋಷಣೆ ಮಾಡಿದೆ.
33 ಆಟಗಾರ್ತಿಯರನ್ನು ಆಯ್ಕೆ ಮಾಡಿರುವ ಗುಂಪಿನಲ್ಲಿ ದೇಶೀಯ ಟೂರ್ನಿಗಳನ್ನು ಗಮನಾರ್ಹ ಪ್ರದರ್ಶನ ನೀಡಿದ ಯುವ ಆಟಗಾರ್ತಿಯರಿಗೂ ಸ್ಥಾನ ನೀಡಲಾಗಿದೆ. ಈ ಶಿಬಿರದಲ್ಲಿ ಆಟಗಾರ್ತಿಯರಲ್ಲಿ ಸಾಮಾರ್ಥ್ಯವನ್ನು ಇನ್ನಷ್ಟು ವೃದ್ಧಿಸಲು ಅಗತ್ಯವಾದ ಎಲ್ಲ ತರಬೇತಿ ನೀಡಲಾಗುವುದು ಎಂದು ಮಹಿಳಾ ತಂಡದ ಮುಖ್ಯ ತರಬೇತುದಾರ ಸ್ಜೋರ್ಡ್ ಮರಿಜ್ನೆ ತಿಳಿಸಿದರು.
ತಂಡದ ವಿವರ
ಗೋಲ್ ಕೀಪರ್:
ಸವಿತಾ, ರಜನಿ, ಸೊನಾಲ್ ಮಿಂಜ್.
ಢಿಫೆಂಡರ್ಸ್:
ದೀಪಾ ಗ್ರೇಸ್ ಎಕ್ಕಾ, ಸುನೀತಾ ಲಕ್ರಾ, ಸುಶೀಲ ಚಾನು, ಗುರುಜೀತ್ ಕೌರ್, ರಶ್ಮಿತಾ ಮಿಂಜ್, ಸುಮನ್ ದೇವಿ, ಮಹಿಮಾ ಚೌಧರಿ, ನಿಶಾ ಸಲೀಮಾ.
ಮಿಡ್ ಫೀಲ್ಡರ್ಸ್:
ನಿಕ್ಕಿ ಪ್ರಧಾನ್, ಮೊನಿಕಾ, ಲಲಿಮಾ ಮಿಂಜ್, ನಮೀತಾ ತೊಪ್ಪೊ, ನೇಹಾ ಗೋಯಲ್, ಉದಿತ್, ಜ್ಯೋತಿ, ಅನುಜಾ ಸಿಂಗ್, ಶ್ಯಾಮ, ಸೋನಿಕಾ, ಕೃಷ್ಣ ಯಾದವ್.
ಮುಂಚೂಣಿ ಆಟಗಾರರು:
ರಾಣಿ ರಾಂಪಾಲ್. ನವನೀತ್ ಕೌರ್, ನವಜೋತ್ ಕೌರ್, ರಾಜವಿಂದರ್ ಕೌರ್, ವಂಧನಾ ಕಟಾರಿಯಾ, ಅನುಪಾ ಬರ್ಲಾ, ಪ್ರಿಯಾಂಕ ವಾಂಖೆಡೆ, ರೀನಾ ಖೋಖರ್, ಲೀಲಾವತಿ