ವಿಶ್ವ ಅಗ್ರ ಸ್ಥಾನಕ್ಕೇರಿದ ಭಜರಂಗ್
ದೆಹಲಿ:
ಭಾರತದ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಅವರು ಕುಸ್ತಿ 65 ಕೆಜಿ ವಿಭಾಗದಲ್ಲಿ ವಿಶ್ವ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಆ ಮೂಲಕ ಅವರು ತಮ್ಮ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಸಾಧನೆಗೆ ಭಾಜನರಾದರು.
24 ವರ್ಷದ ಭಜರಂಗ್ ಅವರು ಪ್ರಸಕ್ತ ಆವೃತ್ತಿಯಲ್ಲಿ ಐದು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಈ ಸಾಧನೆಯೊಂದಿಗೆ ಅವರು 96 ಅಂಕಗಳೊಂದಿಗೆ ಯುಡಬ್ಲ್ಯೂಡಬ್ಲ್ಯೂ ರಾಂಕಿಂಗ್ ನಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಪ್ರತಿಯೊಬ್ಬ ಅಥ್ಲಿಟ್‌ಗಳ ಕನಸು ವಿಶ್ವ ಅಗ್ರ ಸ್ಥಾನ ಅಲಂಕರಿಸುವುದು. ಅದರಂತೆ ವಿಶ್ವ ಅಗ್ರ ಸ್ಥಾನ ಅಲಂಕರಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಭಜರಂಗ್ ನುಡಿದರು.