ಪಿ.ಎಸ್.ಎಲ್‌ಗೆ ಸ್ವೀವ್ ಸ್ಮಿತ್

0
152
ಕರಾಚಿ:

ಚೆಂಡು ವಿರೂಪ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ತಂಡದಿಂದ 12 ತಿಂಗಳು ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಅವರು ಮುಂಬರುವ ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್ ಎಲ್ )ನ ನಾಲ್ಕನೇ ಆವೃತ್ತಿಯಲ್ಲಿ ಆಡಲಿದ್ದಾರೆ.

ಅದರಲ್ಲಿ ಯುನಿಟೆಡ್ ಅರಬ್ ದೇಶದಲ್ಲಿ ಮಾತ್ರ ಆಡಲಿದ್ದು, ಪಾಕಿಸ್ತಾನದಲ್ಲಿ ನಡೆಯುವ ಪ್ಲೇ ಅಪ್ ಪಂದ್ಯಗಳಲ್ಲಿ ಅವರು ಆಡುವುದಿಲ್ಲ. ಎ.ಬಿ.ಡಿವಿಲಿಯರ್ಸ್ ಜತೆಗೆ ವಿಶ್ವ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿದ್ದು, ಯುಎಇನಲ್ಲಿ ನಡೆಯುವ ಪಂದ್ಯಗಳಲ್ಲಿ ಮಾತ್ರ ಅವರು ಆಡಲಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ನಡೆಯುವ ಪ್ಲೇ ಅಪ್ ಹಾಗೂ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಐದು ವರ್ಷ ನಿಷೇಧಕ್ಕೆ ಒಳಗಾಗಿರುವ ಸಲ್ಮಾನ್ ಬಟ್ ಸೇರಿದಂತೆ
ಸ್ಥಳೀಯ ಆಟಗಾರರಾದ ಇಮ್ರಾನ್ ಫಹ್ರಾತ್, ಇಮ್ರಾನ್ ನಜೀರ್, ಅಬ್ದುಲ್ ರಜಾಕ್ ಕೂಡಾ ಆಡುತ್ತಿದ್ದಾರೆ.