Friday, December 13, 2024

ಕರ್ನಾಟಕ ಹಾಕಿ ತಂಡಕ್ಕೆ ಎಸ್.ವಿ. ಸುನಿಲ್ ನಾಯಕ

ಸ್ಪೋರ್ಟ್ಸ್ ಮೇಲ್ ವರದಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ  ಜನವರಿ 31ರಿಂದ ಫೆಬ್ರವರಿ 10ವರೆಗೆ ನಡೆಯಲಿರುವ 9ನೇ ಹಾಕಿ ಇಂಡಿಯಾ ಹಿರಿಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್ (ಎ ಡಿವಿಜನ್)ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ತಂಡದ ನಾಯಕತ್ವವನ್ನು ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಎಸ್.ವಿ. ಸುನಿಲ್ ವಹಿಸಲಿದ್ದಾರೆ. ಎಸ್.ಕೆ. ಉತ್ತಪ್ಪ ಅವರು ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಒಲಿಂಪಿಯನ್ ವಿ.ಆರ್. ರಘುನಾಥ್ ಕೂಡ ತಂಡದಲ್ಲಿದ್ದು, ಈ ಬಾರಿ ಕರ್ನಾಟಕ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆಲ್ಲುವ ಫೇವರಿಟ್ ಎನಿಸಿದೆ. ಡಿ ಗುಂಪಿನಲ್ಲಿರುವ ಕರ್ನಾಟಕ ತಂಡ ಏರ್ ಇಂಡಿಯಾ ಕ್ರೀಡಾ ಉತ್ತೇಜನ ಮಂಡಳಿ, ಕೆನರಾ ಬ್ಯಾಂಕ್, ಹಾಕಿ ಒಡಿಶಾ ಹಾಗೂ ನಾಮ್ಧಾರಿ ಇಲೆವೆನ್ ವಿರುದ್ಧ ಸೆಣಸಲಿದೆ.  ತಂಡ ಭಾನುವಾರ ಗ್ವಾಲಿಯರ್‌ಗೆ ಪ್ರಯಾಣಿಸಲಿದೆ.
ತಂಡದ ವಿವರ
ಎಸ್.ವಿ. ಸುನಿಲ್ (ನಾಯಕ), ಎಸ್.ಕೆ. ಉತ್ತಪ್ಪ (ಉಪನಾಯಕ), ವಿ.ಆರ್. ರಘುನಾಥ್, ವಿಕ್ರಂಕಾಂತ್, ಶಮಂತ್ ಸಿಎಸ್, ತಿಮ್ಮಣ್ಣ ಪಿ.ಎಲ್, ಎಸ್.ಕೆ. ಅಪ್ಪಚ್ಚು,ಭರತ್ ಕೆ.ಆರ್, ಪುನಿತ್ ಆರ್, ಕಮಾರ್ ಎನ್, ಮಣಿಕಾಂತ್ ಬೆಜವಾಡ್, ಲಿಖಿತ್ ಬಿಎಂ, ರಾಜೇಂದ್ರ ಎಂ, ಪೂಣಚ್ಚ ಎಂ.ಜಿ, ಅಯ್ಯಪ್ಪ ಪಿ.ಆರ್, ಚೇತನ್ ಜೆ (ಗೋಲ್‌ಕೀಪರ್), ಅಟಲ್‌ದೇವ್ ಸಿಂಗ್ ಚಹಾಲ್ (ಗೋಲ್‌ಕೀಪರ್), ಕಾರಿಯಪ್ಪ ಕೆ.ಟಿ.
ಕೋಚ್-ಬಿ,ಜೆ. ಕಾರಿಯಪ್ಪ, ಮ್ಯಾನೇಜರ್-ರಿಕಿ ಗಣಪತಿ, ಫಿಸಿಯೋಥೆರಪಿಸ್ಟ್-ಅಪ್ಪಣ್ಣ ಸಿ.ಪಿ.

Related Articles