ಏರ್ ಇಂಡಿಯಾ ಮುಂಬೈ ವಿರುದ್ಧ ಡ್ರಾ ಸಾಧಿಸಿದ ಕರ್ನಾಟಕ

0
275

ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು

ಇಲ್ಲಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ನಾಲ್ಕನೇ ಆವೃತ್ತಿಯ ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಚಾಂಪಿಯನ್ ಶಿಪ್ ನ ಮೊದಲ ದಿನದ ಪಂದ್ಯಗಳು ರೋಚಕ ಕ್ಷಣಗಳಿಗೆ ಸಾಕ್ಷಿಯಾದವು.

ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ್ ಪೆಟ್ರೋಲಿಯಂ ತಂಡ ಆಲ್ ಇಂಡಿಯಾ ಕಸ್ಟಮ್ಸ್ ವಿರುದ್ಧ 2 -2 ಗೋಲಿನಿಂದ ಡ್ರಾ ಸಾಧಿಸಿತು.
ದಿನದ ಎರಡನೇ ಪಂದ್ಯದಲ್ಲಿ ಹಾಕಿ ಕರ್ನಾಟಕ ತಂಡ ಏರ್ ಇಂಡಿಯಾ ವಿರುದ್ಧ 2 -2 ಗೋಲಿನಿಂದ ಸಮಬಲ ಸಾಧಿಸಿತು. ಪಂದ್ಯ ಆರಂಭಗೊಂಡ 3 ನೇ ನಿಮಿಷದಲ್ಲಿ ಸೋಮಯ್ಯ ಕೆಪಿ ಗಳಿಸಿದ ಫೀಲ್ಡ್ ಗೋಲಿನಿಂದ ರಾಜ್ಯ ತಂಡ ಮುನ್ನಡೆ ಕಂಡಿತು. ಬಿ ಗುಂಪಿನಲ್ಲಿ ನಡೆದ ಈ ಪಂದ್ಯದಲ್ಲಿ ಏರ್ ಇಂಡಿಯಾ ಪರ ಜೋಗಿಂದರ್ ಸಿಂಗ್ 7 ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯವನ್ನು ಸಮಬಲ ಗೊಳಿಸಿತು.
ಪ್ರಥಮಾರ್ಧದ ನಂತರ 36 ನೇ ನಿಮಿಷದಲ್ಲಿ ಪೃಥ್ವಿ ರಾಜ್ ಗಳಿಸಿದ ಗೋಲಿನಿಂದ ಕರ್ನಾಟಕ 2 -1 ಗೋಲಿನಿಂದ ಮೇಲುಗೈ ಕಂಡಿತು. ರಾಜ್ಯ ತಂಡದಲ್ಲಿ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ 43 ನೇ ನಿಮಿಷದಲ್ಲಿ ಶಿವೇಂದ್ರ ಸಿಂಗ್ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತ್ತು.