Friday, December 13, 2024

ನಾಳೆಯಿಂದ ಅಖಿಲ ಭಾರತ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ

ಪ್ರಕಾಶ್ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸಿ (ಪಿಡಿಸಿಎಸ್‌ಇ)ನಲ್ಲಿ ಡಿಸೆಂಬರ್ ೧೦ರಿಂದ ೧೫ರವರೆಗೆ ಅಖಿಲ ಭಾರತ ಸೀನಿಯರ್ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ.

ದೇಶದ ವಿವಿಧ ಭಾಗಗಳಿಂದ ಈಗಾಗಲೇ 1000ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ರಿಲಾಯನ್ಸ್ ಡಿಜಿಟಲ್ ಚಾಂಪಿಯನ್‌ಷಿಪ್‌ನ ಪ್ರಮುಖ ಪ್ರಾಯೋಜಕರಾಗಿರುತ್ತಾರೆ. ಯೊನೆಕ್ಸ್ ಸನ್‌ರೈಸ್ ಸಲಕರಣೆಗಳ ಪ್ರಾಯೋಜಕರಾಗಿರುತ್ತಾರೆ. ಪಂದ್ಯಗಳಿಗೆ ಯೊನೆಕ್ಸ್ ಶಟ್ಲ್ ಬಳಸಲಾಗುವುದು.
ಪ್ರಕಾಶ್ ಪಡುಕೋಣೆ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್  ಈ ಚಾಂಪಿಯನ್‌ಷಿಪ್ ಆಯೋಜಿಸಿದೆ. ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ಇದು ನಡೆಯಲಿದೆ. ದೇಶದ ಪ್ರಮುಖ ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಅರ್ಹತಾ ಸುತ್ತಿನ ಪಂದ್ಯಗಳು ಡಿಸೆಂಬರ್ 10 ಮತ್ತು 11ರಂದು ನಡೆಯಲಿದೆ. ಪುರುಷರ ಸಿಂಗಲ್ಸ್, ಮಹಿಳಾ ಸಿಂಗಲ್ಸ್, ಪುರುಷರ ಡಬಲ್ಸ್ ಹಾಗೂ ಮಹಿಳಾ ಡಬಲ್ಸ್, ಹಾಗೂ ಮಿಶ್ರ ಡಬಲ್ಸ್ ಸೇರಿ ಒಟ್ಟು ೮೦೦ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ. ಸಿಂಗಲ್ಸ್‌ನಲ್ಲಿ 32 ಹಾಗೂ ಡಬಲ್ಸ್‌ನಲ್ಲಿ 16ಹಂತದ ಪಂದ್ಯಗಳು ನಡೆಯಲಿವೆ. ಡಿಸೆಂಬರ್ 12ರಿಂದ ಪ್ರಧಾನ ಸುತ್ತಿನ ಪಂದ್ಯಗಳು ಡಿಸೆಂಬರ್ 15ರ ಸಂಜೆ ಫೈನಲ್ ಪಂದ್ಯಗಳು ನಡೆಯಲಿವೆ. ಚಾಂಪಿಯನ್‌ಷಿಪ್‌ನ ಒಟ್ಟು ಬಹುಮಾನದ ಮೊತ್ತ 5 ಲಕ್ಷ ರೂ.ಗಳು.  ಕಳೆದ ಬಾರಿಯ ಚಾಂಪಿಯನ್ ಕರ್ನಾಟಕದ ಮಿಥುನ್ ಮಂಜುನಾಥ್, ರನ್ನರ್ ಅಪ್ ಸಿದ್ಧಾರ್ಥ್ ಪ್ರತಾಪ್ ಸಿಂಗ್, ಅನ್ಷುಲ್ ಯಾದವ್, ಚಿರಾಗ್ ಸೇನ್, ಪ್ರತೂಲ್ ಜೋಷಿ, ಲಕ್ಷ್ಯ ಸೇನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಪ್ರಮುಖ ಆಟಗಾರರು. ವನಿತೆಯರ ವಿಭಾಗದಲ್ಲಿ ರಿತುಪರ್ಣ ದಾಸ್, ಶಿಖಾ ಗೌತಮ್, ಅಶ್ಮಿತಾ ಚಲಿಹಾ ಪ್ರಮುಖ ಸ್ಪರ್ಧಿಗಳು.

Related Articles