Friday, February 23, 2024

ಹಾಕಿ: ಫ್ರಾನ್ಸ್‌ಗೆ ಶರಣಾದ ಭಾರತ

 Sportsmail

 ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಹಾಕಿಯನ್ನೇ ಆಡದ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರದಲ್ಲಿ ಆರಂಭಗೊಂಡ ಎಫ್‌ಐಎಚ್‌ ವಿಶ್ವ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫ್ರಾನ್ಸ್‌ ವಿರುದ್ಧ 4-5 ಗೋಲುಗಳಿಂದ ಸೋತಿದೆ.

ವಿಶ್ವದಲ್ಲಿ 5ನೇ ರಾಂಕ್‌ ಹೊಂದಿರುವ ಭಾರತ 26ನೇ ರಾಂಕ್‌ ಹೊಂದಿರುವ ಫ್ರಾನ್ಸ್‌ ವಿರುದ್ಧ ಸೋಲನುಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ವಿವೇಕ್‌ ಸಾಗರ್‌ ಪ್ರಸಾದ್‌ ನಾಯಕತ್ವದ ಭಾರತ ತಂಡ ಫ್ರಾನ್ಸ್‌ನ ತಿಮೋತಿ ಕ್ಲೆಮೆಂಟ್ಸ್‌ ಗಳಿಸಿದ ಹ್ಯಾಟ್ರಿಕ್‌ ಗೋಲಿನಿಂದ ಆಘಾತ ಅನುಭವಿಸಿತು. ಭಾರತದ ಪರ ಸಂಜರ್‌ ಹ್ಯಾಟ್ರಿಕ್‌ ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಮುಂದಿನ ಸುತ್ತಿನಲ್ಲಿ ಭಾರತ ತಂಡ ಕೆನಡಾ ವಿರುದ್ಧ ಸೆಣಸಲಿದೆ. ದಿನದ ಇತರ ಪಂದ್ಯಗಳಲ್ಲಿ ಬೆಲ್ಜಿಯಂ 5-1 ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಗಳಿಸಿದೆ. ದಿನದ ಎರಡನೇ ಪಂದ್ಯದಲ್ಲಿ ಜರ್ಮನಿ ತಂಡ ಪಾಕಿಸ್ತಾನದ ವಿರುದ್ಧ  5-2 ಅಂತರದಲ್ಲಿ ಗೆದ್ದಿದೆ. ಕೆನಡಾ ತಂಡ ಪೊಲೆಂಡ್‌ ವಿರುದ್ಧ 0-1 ಅಂತರದಲ್ಲಿ ಸೋತಿದೆ. ಮಲೇಷ್ಯಾ ತಂಡ ಚಿಲಿ ವಿರುದ್ಧ 2-1 ಗೋಲಿನಿಂದ ಗೆದ್ದಿದೆ.

Related Articles