Saturday, October 12, 2024

ಜನವರಿ 22 & 23 ಮೊಗವೀರ ಪ್ರೀಮಿಯರ್‌ ಲೀಗ್

Sportsmail        

ಬೆಂಗಳೂರು ಮಹಾನಗರದಲ್ಲಿ ಬದುಕನ್ನು ಕಟ್ಟಿಕೊಂಡ ಮೊಗವೀರ ಸಮುದಾಯದ ಯುವಕರು ಕಟ್ಟಿದ ಮೋಗವೀರ  ಸಂಘ ಬೆಂಗಳೂರು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದ್ದು, ಈ ಬಾರಿ ಎಂದಿನಂತೆ ಸಮುದಾಯದ ಯುವಕರಿಗಾಗಿ ಜನವರಿ 22 ಮತ್ತು 23,  2022ರಂದು ಎರಡು ದಿನಗಳ ಕಾಲ ಮೊಗವೀರ ಪ್ರೀಮಿಯರ್‌ ಲೀಗ್‌ (MPL) ಕ್ರಿಕೆಟ್‌ ಟೂರ್ನಿ ಆಯೋಜಿಸಿದೆ.

ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಈ ಕ್ರಿಕೆಟ್‌ ಹಬ್ಬ ಕಳೆದ ಬಾರಿ ಕೊರೋನಾ ಹಿನ್ನೆಲೆಯಲ್ಲಿ ನಡೆದಿರಲಿಲ್ಲ. ಈ ಬಾರಿ ಚೇತನ್‌ ಜಿ. ಅವರ ಅಧ್ಯಕ್ಷತೆಯಲ್ಲಿ ಸಂಘ ಮತ್ತೊಮ್ಮೆ ಕ್ರಿಕೆಟ್‌ ಹಬ್ಬಕ್ಕೆ ಸಜ್ಜಾಗಿದೆ. ಬೆಂಗಳೂರಿನಲ್ಲಿ ವಿವಿಧ ಸ್ಥಳಗಳಲ್ಲಿ ಬದುಕನ್ನು ಕಟ್ಟಿಕೊಂಡಿರುವ ಸಮುದಾಯದ ಸದಸ್ಯರು ಒಂದೆಡೆ ಸೇರಿ ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶಿಸಲು ಈ ಪ್ರೀಮಿಯರ್‌ ಲೀಗ್‌ ನಡೆಸುವ ಉದ್ದೇಶವಾಗಿದೆ. ಇದು ಮೊಗವೀರ ಸಂಘದ ಸದಸ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಮೊಗವೀರ ಸಂಘ ಬೆಂಗಳೂರು (ನೋಂ) ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಬಿಡ್ಡಿಂಗ್‌ ಮಾದರಿಯಲ್ಲಿ ತಂಡಗಳಿಗೆ ಆಟಗಾರರ ಪ್ರಕ್ರಿಯೆ ನಡೆಯಲಿದೆ. ಸಂಘದ ಸದಸ್ಯರಿಗೆ ಮಾತ್ರ ಭಾಗಹಿಸಲು ಅವಕಾಶ ಇರುವುದರಿಂದ ಇದುವರೆಗೂ ಸದಸ್ಯತ್ವ ಹೊಂದದೇ ಇರುವವರು ಸದಸ್ಯತ್ವ ಪಡೆದು ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸಬಹುದು.

ಆಸಕ್ತರು QR ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಅಥವಾ ನೀಡಲಾದ ಲಿಂಕ್‌ (https://formfaca.de/sm/Keuv8H7cP ) ಮೂಲಕ ತಮ್ಮ ಮಾಹಿತಿಗಳನ್ನು ಗೂಗಲ್‌ ಫಾರ್ಮ್‌ನಲ್ಲಿ ಭರ್ತಿ ಮಾಡಬೇಕು. ಡಿಸೆಂಬರ್‌ 5, 2021ರ ಒಳಗಾಗಿ ನೋಂದಾವಣೆ ಫಾರ್ಮ್‌ ತಲುಪಬೇಕು, ಆ ನಂತರ ಬಂದ ನೋದಣಿಗಳನ್ನು ಪರಿಗಣಿಸಲಾಗುವುದಿಲ್ಲ.

ಹಿಂದಿನ ಕ್ರೀಡಾಕೂಟದ ಮೆಲುಕು

ರಾಜ್ಯದ ಯಾವುದೇ ಭಾಗದಲ್ಲಿರುವ ಮೊಗವೀರರು, ಬೆಂಗಳೂರು ಮೊಗವೀರ ಸಂಘದಲ್ಲಿ ಹೆಸರು ನೋದಾಯಿಸಿದ್ದಲ್ಲಿ ಈ ಲೀಗ್‌ನಲ್ಲಿ ಆಡಬಹುದು. ಡಿಸೆಂಬರ್‌ 5 ಹೆಸರು ನೋಂದಾಯಿಸಲು ಕೊನೆಯ ದಿನಾಂಕ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಚಂದ್ರಶೇಖರ್ ಎಸ್: 9342568877

ಸುನೀಲ್  ಸುವರ್ಣ: 8105437687

ಅಲೋಕ್ ಪುತ್ರನ್:

9480094419

https://formfaca.de/sm/Keuv8H7cP

Related Articles