Saturday, July 27, 2024

ರಣಜಿ ಟ್ರೋಫಿ: ಡ್ರಾಗೆ ತೃಪ್ತರಾದ ಕನ್ನಡಿಗರು

ಸೂರತ್: 

ಕರ್ನಾಟಕ ಹಾಗೂ ಗುಜರಾತ್  ನಡುವೆ ಮುಕ್ತಾಯವಾದ ರಣಜಿ ಟ್ರೋಫಿ ಎಲೈಟ್ ಎ ಗುಂಪಿನ ಆರನೇ ಸುತ್ತಿನ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು. ಇಲ್ಲಿನ ಲಾಲಾಬಾಯಿ ಕ್ರೀಡಾಂಗಣದಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್‌ಗಳಿಂದ ದ್ವಿತೀಯ ಇನಿಂಗ್ಸ್  ಆರಂಭಿಸಿದ ಗುಜರಾತ್ ತಂಡ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ 124 ಓವರ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 345 ರನ್ ಗಳಿಸಿತು.

ಗುಜರಾತ್ ಕಡೆ ಅತ್ಯತ್ತಮ ಬ್ಯಾಟಿಂಗ್ ಮಾಡಿದ ಮನಪ್ರಿತ್ ಜುನೇಜಾ 212 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 98 ರನ್ ಗಳಿಸಿ ಶತದಂಚಿನಲ್ಲಿ ಕೆ. ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ರಾಜುಲ್ ಭಟ್ ಅವರು 255 ಎಸೆತಗಳಲ್ಲಿ  8 ಬೌಂಡರಿ 91 ರನ್ ಗಳಿಸಿದರು. ಭಾರ್ಗವ್ ಮೆರಾಯ್ ಕೂಡ 74 ರನ್ ಸಿಡಿಸಿ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದರು.
ಕರ್ನಾಟಕ  ಪರ ರೋನಿತ್ ಮೋರೆ ಹಾಗೂ ಕೆ. ಗೌತಮ್ ತಲಾ 4 ವಿಕೆಟ್ ಪಡೆದರು. 172 ರನ್ ಗುರಿ ಬೆನ್ನತ್ತಿದ ಕರ್ನಾಟಕ  ನಾಲ್ಕನೇ ದಿನಾಂತ್ಯಕ್ಕೆೆ 4 ವಿಕೆಟ್ ಕಳೆದುಕೊಂಡು 107 ರನ್ ದಾಖಲಿಸಿತು. ಅಂತಿಮವಾಗಿ ಪಂದ್ಯ ಡ್ರಾಾನಲ್ಲಿ ಮುಕ್ತಾಯವಾಯಿತು. ಇದರೊಂದಿಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್  ನಲ್ಲಿ ಮುನ್ನಡೆ  ಪಡೆಯುವ ಮೂಲಕ  ಮೂರು ಅಂಕ ಪಡೆಯಿತು. ಕರ್ನಾಟಕ ಪರ ಮಯಾಂಕ್ ಅಗರ್‌ವಾಲ್ 53 ರನ್ ಗಳಿಸಿದರೆ, ರವಿಕುಮಾರ್ ಸಮರ್ಥ್ 33 ರನ್ ಗಳಿಸಿದರು. ಅಕ್ಷರ್ ಪಟೇಲ್ 3 ವಿಕೆಟ್ ಪಡೆದರು.

Related Articles