Friday, December 13, 2024

ಅಂದು 16 ಕೋಟಿ, ಇಂದು ಕೇಳುವವರೇ ಇಲ್ಲ!

ಸ್ಪೋರ್ಟ್ಸ್ ಮೇಲ್ ವರದಿ

2015ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 16 ಕೋಟಿ ರೂ.ಗಳಿಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲಾಗಿದ್ದ ಭಾರತದ ಶ್ರೇಷ್ಠ ಆಲ್ರೌಂಡರ್ ಯುವರಾಜ್ ಸಿಂಗ್ ಅವರನ್ನು ಈ ಬಾರಿ ಕೇಳುವವರೇ ಇಲ್ಲವಾಯಿತು.

 

ಇತ್ತೀಚಿನ ದಿನಗಳಲ್ಲಿ ಯುವರಾಜ್ ಸಿಂಗ್ ಅವರ ಬ್ಯಾಟ್‌ನಿಂದ ರನ್ ಬರುತ್ತಿರಲಿಲ್ಲ. ರಣಜಿಯಲ್ಲೂ ಅವರು ಮಿಂಚಿನ ಆಟವಾಡಿಲ್ಲ. ಇದರಿಂದಾಗಿ ಐಪಿಎಲ್ ಫ್ರಾಂಚೈಸಿಗಳು  ಪಂಜಾಬಿನ ಆಟಗಾರನ ಬಗ್ಗೆ ಆಸಕ್ತಿ ತೋರದ ಕಾರಣ ಅವರು ಮಾರಾಟವಾಗಲಿಲ್ಲ. ಕನಿಷ್ಠ 1 ಕೋಟಿ ರೂ.ಗಳಿಗೂ ಅಂದರೆ ಮೂಲ ಬೆಲೆಗೂ ಅವರು ಯಾವುದೇ ತಂಡವನ್ನು ಸೇರಿಕೊಳ್ಳುವಲ್ಲಿ ವಿಲರಾದರು.
ಡೆಲ್ಲಿ ಡೇರ್ ಡೆವಿಲ್ಸ್ ಪರ ಅವರು 16 ಕೋಟಿ ರೂ.ಗಳಿಗೆ ಮಾರಾಟಗೊಂಡಾಗ ಇಡೀ ಕ್ರಿಕೆಟ್ ಜಗತ್ತೇ ಅಚ್ಚರಿಪಟ್ಟಿತ್ತು. ಮಾಧ್ಯಮದವರು ಕೇಳುವ ಪ್ರಶ್ನೆಗಳಿಂದಲೂ ಯುವರಾಜ್ ಅವರಿಗೆ ಕಿರಿಕಿರಿಯಾಗ್ತಿತು. ನಾನೇನು ಅವರಲ್ಲಿ ಅಷ್ಟು ಮೊತ್ತ ಕೊಟ್ಟು ಖರೀದಿಸಿ ಎಂದು ಹೇಳಿಲ್ಲ, ಎಂಬ ಉತ್ತರವನ್ನು ಅವರು ಮಾಧ್ಯಮದವರಿಗೆ ಸಿಟ್ಟಿನಿಂದಲೇ ಹೇಳಿದ್ದರು.
ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಕ್ರಿಕೆಟ್ ಜಗತ್ತಿನಲ್ಲಿ ದಾಖಲೆ ಬರೆದಿರುವುದು ಈಗ ಇತಿಹಾಸ. ಹಣ ಹೂಡುವವನಿಗೆ ಹಣ ಗಳಿಸುವ ಉದ್ದೇಶವೂ ಇರುತ್ತದೆ. ಯುವರಾಜ್ ಸಿಂಗ್ ಅವರ ಕ್ರಿಕೆಟ್ ಬದುಕು ಸಂಜೆಯತ್ತ ಸಾಗುತ್ತಿದೆ. ಈಗ ತಮಗೆ ಬೆಲೆ ಇಲ್ಲ ಎಂಬುದು ಕೂಡ ಅವರಿಗೆ ಮನವರಿಕೆಯಾಗದಿರದು.

Related Articles