Monday, June 24, 2024

ಮಾಯಾಂಕ್ ಅಗರ್ವಾಲ್ ಮೂರನೇ ಟೆಸ್ಟ್ ಆಡಲಿ

ದೆಹಲಿ: 

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಭಾರತೀಯ ನಿಯಂತ್ರಣ ಮಂಡಳಿ ಘೋಷಿಸಿದ್ದು, ಗಾಯದಿಂದ ಚೇತರಿಕೆ ಕಾಣದ ಪೃಥ್ವಿ ಶಾ ಅವರ ಸ್ಥಾನಕ್ಕೆೆ ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್‌ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಉತ್ತಮ ಫಾರ್ಮ್ ನಲ್ಲಿರುವ ಮಾಯಾಂಕ್ ಅವರಿಗೆ ಅವಕಾಶ ನೀಡಲು ಇದು ಸೂಕ್ತ ಕಾಲ.

ಗಾಯದಿಂದ ಚೇತರಿಕೆ ಕಂಡಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡಕ್ಕೆೆ ಪರಿಗಣಿಸಲಾಗಿದೆ.
ಟೆಸ್‌ಟ್‌ ಸರಣಿಗೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಪಾದದ ಗಾಯಕ್ಕೆೆ ಒಳಗಾಗಿದ್ದ ಪೃಥ್ವಿ ಶಾ ಅವರು ಚೇತರಿಕೆ ಕಂಡಿಲ್ಲ. ಹಾಗಾಗಿ, ಅವರು ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಏಷ್ಯಾ ಕಪ್ ವೇಳೆ ಗಾಯಗೊಂಡಿದ್ದರು. ಅವರು ಇದೀಗ ಚೇತರಿಕೆ ಕಂಡಿರುವ ಹಿನ್ನೆೆಲೆಯಲ್ಲಿ ಅವರು ಟೀಂ ಇಂಡಿಯಾ ಕೂಡಿಕೊಳ್ಳುತ್ತಿದ್ದಾರೆ.
ಅಂತಿಮ ಎರಡು ಪಂದ್ಯಗಳಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ರಾಹುಲ್, ಪೂಜಾರ, ರಹಾನೆ, ವಿಹಾರಿ, ರೋಹಿತ್ ಶರ್ಮಾ, ಪಂತ್, ಪಾರ್ಥಿವ್ ಪಟೇಲ್,  ಅಶ್ವಿನ್, ಜಡೇಜಾ, ಕುಲ್ದೀಪ್,  ಶಮಿ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್‌ವಾಲ್.

Related Articles