Sunday, October 27, 2024

ವೈಭವೋಪೇತ “ಶ್ಯಾಮನೂರು ಡೈಮಂಡ್” ದಾವಣಗೆರೆ ತಂಡ ಈ ಕ್ರಿಕೆಟ್ ಹಬ್ಬ

ಆರ್.ಕೆ.ಆಚಾರ್ಯ ಕೋಟ

ಸತತ ಐದು ದಿನಗಳಿಂದ ಹೊನಲು ಬೆಳಕಿನಲ್ಲಿ ನಡೆದ ಹಗಲುರಾತ್ರಿಯ ವೈಭವೋಪೇತ “ಶ್ಯಾಮನೂರು ಡೈಮಂಡ್” ದಾವಣಗೆರೆ ತಂಡ ಈ ಕ್ರಿಕೆಟ್ ಹಬ್ಬ ಆದಿತ್ಯವಾರ ಸುಸಂಪನ್ನವಾಯಿತು.

ನೆರೆ ರಾಜ್ಯ ಕೇರಳ ಸಹಿತ ರಾಜ್ಯದ  ಬಲಿಷ್ಠ 26 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ
ತಂಡಗಳನ್ನು 4 ಪೂಲ್ ಗಳನ್ನಾಗಿ ವಿಭಾಗಿಸಿದ್ದು ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಿತು.

ಕ್ವಾರ್ಟರ್ ಫೈನಲ್ ನಲ್ಲಿ ನ್ಯಾಶ್ ಬೆಂಗಳೂರು,ಜಾನ್ಸನ್ ಕುಂದಾಪುರ,ಜನಪ್ರಿಯ ದಾವಣಗೆರೆ,ಫ್ರೆಂಡ್ಸ್ ಬೆಂಗಳೂರು,ರಿಯಲ್ ಫೈಟರ್ಸ್ ಮಲ್ಪೆ,ನವೀನ್ ಫೈಟರ್ಸ್ ತಂಡ ಸೆಣಸಾಡಿದ್ದವು.


ಸೆಮಿಫೈನಲ್ ನಲ್ಲಿ ರಿಯಲ್ ಪೈಟರ್ಸ್ ತಂಡವನ್ನು ಮಣಿಸಿ ನ್ಯಾಶ್ ಫೈನಲ್ ನೆಗೆದಿದ್ದರೆ,ಜನಪ್ರಿಯ ದಾವಣಗೆರೆ ಅದೃಷ್ಟ ಚೀಟಿಯ ಮುಖಾಂತರ ಫೈನಲ್ ಪ್ರವೇಶ ಪಡೆದಿತ್ತು.

ಅಂತಿಮವಾಗಿ ಫೈನಲ್ ನಲ್ಲಿ  ಟಾಸ್ ಗೆದ್ದ ಜನಪ್ರಿಯ ದಾವಣಗೆರೆ ಫೀಲ್ಡಿಂಗ್ ಆಯ್ದು ಕೊಂಡಿತು.
ಬ್ಯಾಟಿಂಗ್ ಇಳಿಸಲ್ಪಟ್ಟ ನ್ಯಾಶ್ ತಂಡ ಭರವಸೆಯ ಆರಂಭಿಕ ಆಟಗಾರ ಅಕ್ಷಯ್ ಸಿ.ಕೆ ಅವರ ಉಪಯುಕ್ತ
20 ರನ್ ಗಳ ನೆರವಿನಿಂದ 7 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 46 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಎದುರಾಳಿಗೆ ನಿಗದಿಗೊಳಿಸಿತ್ತು.
ಬೆಂಬತ್ತಿದ ದಾವಣಗೆರೆಯ ತಂಡ ನ್ಯಾಶ್ ತಂಡದ ನಿಖರ ದಾಳಿಯ ಎದುರು 7 ಓವರ್ ಗಳಲ್ಲಿ  1 ವಿಕೆಟ್ ನಷ್ಟದಲ್ಲಿ ಕೇವಲ  35 ರನ್ ಗಳಿಸಲಷ್ಟೇ ಶಕ್ತವಾಯಿತು.
ನ್ಯಾಶ್ ತಂಡ 3,55,000 ಪ್ರಶಸ್ತಿ ಮೊತ್ತದ ಸಹಿತ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ಅಪ್
ಜನಪ್ರಿಯ ದಾವಣಗೆರೆ 2,25,000 ಹಾಗೂ ಆಕರ್ಷಕ ಟ್ರೋಫಿ ಹಾಗೂ
ತೃತೀಯ ಸ್ಥಾನಿ ರಿಯಲ್ ಫೈಟರ್ಸ್ ತಂಡ 1,25,000 ನಗದು ಸಹಿತ ಟ್ರೋಫಿಯನ್ನು ಪಡೆದು ಕೊಂಡಿತು.

ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಅರ್ಹವಾಗಿ ನ್ಯಾಶ್ ನ ಅಕ್ಷಯ್ ಸಿ.ಕೆ ಪಡೆದು ಕೊಂಡರೆ,
ಕ್ರಮವಾಗಿ ಬೆಸ್ಟ್ ಬೌಲರ್ ನ್ಯಾಶ್ ನ ಅಪೆಕ್ಸ್,
ಬೆಸ್ಟ್ ಬ್ಯಾಟ್ಸ್ ಮನ್ ಫ್ರೆಂಡ್ಸ್ ನ ಸಾಗರ್ ಭಂಡಾರಿ, ಟೂರ್ನಿಯುದ್ದಕ್ಕೂ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿದ
ನ್ಯಾಶ್ ನ ಜಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಕೊಂಡರೆ,
ಬೆಸ್ಟ್ ಫೀಲ್ಡರ್ ದಾವಣಗೆರೆಯ ಮಂಜು,
ಹಾಗೂ ಬೆಸ್ಟ್ ಕೀಪರ್ ನ್ಯಾಶ್ ನ ಚೇತನ್ ಜಾನಿ ಪಡೆದುಕೊಂಡರು.

ಟೂರ್ನಿಯ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ಅವರ “M.Sports” ಅಚ್ಚುಕಟ್ಟಾಗಿ ಬಿತ್ತರಿಸಿದ್ದು
8 ಲಕ್ಷಕ್ಕೂ ಹೆಚ್ಚಿನ ವೀವರ್ಸ್ ಸಾಧನೆಗೈದರು.
ವೀಕ್ಷಕ ವಿವರಣೆಕಾರರಾಗಿ ವಿನಯ್ ಉದ್ಯಾವರ್ ಹಾಗೂ ಪ್ರಶಾಂತ್ ಅಂಬಲಪಾಡಿ,ಮದನ್ ಸಹಕರಿಸಿದರೆ,
ಅಂಪಾಯರ್ ಆಗಿ ಕರ್ನಾಟಕದ ಬಿಲ್ಲಿ ಬೌಡೆನ್,
ಡ್ಯಾನ್ಸಿಂಗ್ ಅಂಪಾಯರ್  ಮದನ್ ಮಡಿಕೇರಿ,
ಉದ್ಭವ್ ಕುಮಾರ್ ಹಾಗೂ ಪೂರ್ಣರವರು ಸಹಕರಿಸಿದರೆ,
ಶ್ಯಾಮನೂರು ತಂಡ ಅತ್ಯಂತ ವೈಭವೋಪೇತ ಹಾಗೂ ಯಶಸ್ವಿಯಾಗಿ ಪಂದ್ಯಾಟವನ್ನು ನೆರವೇರಿಸಿದ್ದರು…

Related Articles