Saturday, July 20, 2024

ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್ ಗೆ ಹ್ಯಾಲೆಪ್

ಕ್ಯಾನ್‌ಬೆರಾ, ಡಿ 3 (ಯುಎನ್‌ಐ):

ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ವಿಶ್ವ ಅಗ್ರ ಕ್ರಮಾಂಕದ ಆಟಗಾರ್ತಿ ಸಿಮೋನಾ ಹ್ಯಾಲೆಪ್‌ ಹಾಗೂ ಯುಎಸ್‌ ಓಪನ್‌ ಚಾಂಪಿಯನ್‌ ನವೋಮಿ ಒಸಾಕ ಭಾಗವಹಿಸುತ್ತಿದ್ದಾರೆ.

ವಿಶ್ವದಾದ್ಯಂತ ಶ್ರೇಷ್ಠ ಆಟಗಾರ್ತಿಯರು ಈ ಟೂರ್ನಿಯಲ್ಲಿ ಕಣಕ್ಕೆಇಳಿಯುತ್ತಿದ್ದು, ಅಗ್ರ 10 ಆಟಗಾರ್ತಿಯರಲ್ಲಿ ಎಂಟು ಮಂದಿ ಸಿಡ್ನಿ ಇಂಟರ್‌ನ್ಯಾಷನಲ್‌ ಆಡಲಿದ್ದಾರೆ. ಮುಖ್ಯವಾಗಿ ಸಿಮೋನಾ ಹ್ಯಾಲೆಪ್‌ ಹಾಗೂ ನವೋಮಿ ಒಸಾಕ ಹಣಾಹಣಿ ಈ ಟೂರ್ನಿಯಲ್ಲಿ ತೀವ್ರ ಕುತೂಹಲ ಕೆರಳಿಸಿದೆ ಎಂದು ಟೂರ್ನಿ ಆಯೋಜಕರು ತಿಳಿಸಿದರು.

ಸಿಡ್ನಿ ಓಪನ್‌ ಮುಗಿದ ಒಂದು ವಾರದ ಬಳಿಕ ಆಸ್ಟ್ರೇಲಿಯಾ ಓಪನ್‌ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಮಹಿಳಾ ಆಟಗಾರ್ತಿಯರಿಗೆ ಈ ಟೂರ್ನಿ ಪೂರ್ವ ಸಿದ್ಧತೆಗೆ ಉತ್ತಮ ವೇದಿಕೆಯಾಗಿದೆ.

Related Articles