Thursday, December 12, 2024

ನ್ಯಾಶ್ ಬೆಂಗಳೂರು ತಂಡಕ್ಕೆ ವಿಭೂಷಣ್ ಸ್ಮಾರಕ ಕಪ್

ಆರ್.ಕೆ.ಆಚಾರ್ಯ

ಕರ್ನಾಟಕ ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಚರಿತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಕಳೆದ ವಾರ ಐತಿಹಾಸಿಕ ಪಂದ್ಯಾಟವೊಂದು . ಪ್ರಪ್ರಥಮ ಬಾರಿಗೆ ಪ್ರವೇಶ ಶುಲ್ಕ ರಹಿತ ಪಂದ್ಯಾಟ ಗರಿಷ್ಟ ಮೊತ್ತದ ಪ್ರಶಸ್ತಿಯೊಂದಿಗೆ ಏರ್ಪಟ್ಟಿತ್ತು.

2010 ರ ಆಸುಪಾಸಿನಲ್ಲಿ ಬಲಿಷ್ಟ ತಂಡಗಳನ್ನು ಅನಾಯಾಸವಾಗಿ ಮಣಿಸುತ್ತಿದ್ದ ಶ್ರೇಷ್ಠ ತಂಡವಾಗಿದ್ದ (Unpredictable Bangalore K.R Puram) ತಂಡದ ಅಗಲಿದ ಪ್ರತಿಭಾನ್ವಿತ ಆಲ್ ರೌಂಡರ್ ವಿಭೂಷಣ್ (ಆಪ್ಲಾ) ಇವರ ಸ್ಮರಣಾರ್ಥ ವಿಭೂಷಣ್  ಸ್ಮಾರಕ ಟೂರ್ನಿ ನಡೆಯಿತು. ಶ್ರೀ ರಾಘವೇಂದ್ರ ಎನ್‌.ಜಿ ಅವರ ದಕ್ಷ ಸಾರಥ್ಯದಲ್ಲಿ ಕೆ.ಆರ್.ಪುರಂ ನ ಐ.ಟಿ.ಐ ಗ್ರೌಂಡ್ ನಲ್ಲಿ ಒಂದು ದಿನದ ಹಗಲಿನ ರಾಜ್ಯ ಮಟ್ಟದ ಪಂದ್ಯಾಟ ನಡೆಸಿತ್ತು.
ಉಡುಪಿಯ ರಿಯಲ್ ಫೈಟರ್ಸ್ ಮಲ್ಪೆ,ಜೈ ಕರ್ನಾಟಕ ಬೆಂಗಳೂರು,ಎಸ್.ಝಡ್.ಸಿ.ಸಿ,ಫ್ರೆಂಡ್ಸ್ ಬೆಂಗಳೂರು ಸಹಿತ 8 ತಂಡಗಳು ಕುತೂಹಲಕಾರಿ ಹಣಾಹಣಿಗಿಳಿದಿದ್ದವು. ಲೀಗ್ ಸಮರದ ಬಳಿಕ ಯುವ ಕ್ರಿಕೆಟಿಗರ ಪಡೆ ರಾಕರ್ಸ್ ಬೆಂಗಳೂರು ತಂಡ ದಾವಣಗೆರೆ ತಂಡವನ್ನು ಸೋಲಿಸಿದರೆ, ಬಲಿಷ್ಠ ನ್ಯಾಶ್ ತಂಡ ರಿಯಲ್ ಫೈಟರ್ಸ್ ಮಲ್ಪೆ ತಂಡವನ್ನು ಸೋಲಿಸಿ ಫೈನಲ್ ತಲುಪಿದವು. ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಕರ್ಸ್ ತಂಡ 4 ಓವರ್ ಗಳಲ್ಲಿ 20 ರನ್ ಗಳಿಸಿದರೆ, ಸುಲಭದ ಗುರಿ ಬೆನ್ನತ್ತಿದ ನ್ಯಾಶ್ ತಂಡ 3 ಓವರ್ ಗಳಲ್ಲಿ ವಿಜಯದ ಗುರಿಯನ್ನು ಸಾಧಿಸಿದರು.
ವಿಜಯೀ ನ್ಯಾಶ್ ತಂಡ 1,00,000 ರೂ ನಗದು ಸಹಿತ ಟೆನ್ನಿಸ್ ಬಾಲ್ ಇತಿಹಾಸದಲ್ಲೇ  ಅತಿ ಎತ್ತರದ ಟ್ರೋಫಿ (10 ಅಡಿ ಎತ್ತರ)ಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಅಪ್  ತಂಡ ರಾಕರ್ಸ್ 50,000 ಸಾವಿರ ರೂ ನಗದು
ಸಹಿತ 7 ಅಡಿ  ಎತ್ತರದ ಟ್ರೋಫಿಯನ್ನು ಪಡೆದುಕೊಂಡರು. ಸರಣಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನ್ಯಾಶ್ ನ ಅಕ್ಷಯ್.ಸಿ.ಕೆ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದರು.

Related Articles