Thursday, April 18, 2024

ಈಶಾನಿ ಗ್ರೂಪ್ಸ್ ನೇರಳಕಟ್ಟೆ ಮಡಿಲಿಗೆ ಜೈಹಿಂದ್ ಟ್ರೋಫಿ

ಆರ್.ಕೆ.ಆಚಾರ್ಯ 

ಫ್ರೆಂಡ್ಸ್  ಕೊಡ್ಲಾಡಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ 40 ಗಜಗಳ ರಾಜ್ಯಮಟ್ಟದ ಪಂದ್ಯಾಟ 2 ದಿನಗಳ ಕಾಲ ಹೊನಲು ಬೆಳಕಿನಡಿಯಲ್ಲಿ  ಕೊಡ್ಲಾಡಿಯ ಹೈಸ್ಕೂಲ್ ಗ್ರೌಂಡ್ ನಲ್ಲಿ ನಡೆಯಿತು.

ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಅಶಕ್ತರ ನೆರವಿಗಾಗಿ  ಫ್ರೆಂಡ್ಸ್ ಕೊಡ್ಲಾಡಿ ಸ್ಪೋರ್ಟ್ಸ್ ಕ್ಲಬ್ ಸಂಘಟಿಸಿದ್ದ ಈ ಟೂರ್ನಿಯಲ್ಲಿ ರಾಜ್ಯದ ಪ್ರತಿಷ್ಟಿತ 18 ತಂಡಗಳು ಭಾಗವಹಿಸಿದ್ದವು. ದೂರದ ಬೆಂಗಳೂರಿನ ಅಗ್ರಮಾನ್ಯ ಆಟಗಾರರು ಕುಂದಾಪುರದ ಕೆಲವು ತಂಡಗಳ ಪರವಾಗಿ ಆಡಿದ್ದರು.ಕ್ವಾರ್ಟರ್ ಫೈನಲ್ ಹಂತದಲ್ಲಿ ಕುಂದಾಪುರದ ಶ್ರೇಷ್ಠ ತಂಡಗಳಾದ ಜಾನ್ಸನ್ ಹಂಗಳೂರು,ಚಾಲೆಂಜ್ ಕುಂದಾಪುರ,ಕೀಳೇಶ್ವರಿ ಕುಂದಾಪುರ ಹಾಗೂ ಭಾಂಡ್ಯದ ತಂಡಗಳು ಸ್ಪರ್ಧೆಯಲ್ಲಿದ್ದು ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾದವು.ಸೆಮಿಫೈನಲ್ ನಲ್ಲಿ ಬಲಿಷ್ಟ ಎಸ್.ಎಸ್.ಕ್ಯೂ ಉಡುಪಿ ತಂಡವನ್ನು ಈಶಾನಿ ಗ್ರೂಪ್ಸ್ ನೇರಳಕಟ್ಟೆ ತಂಡ ಸೋಲಿಸಿದರೆ,ಸ್ಥಳೀಯ ಆಟಗಾರರನ್ನೊಳಗೊಂಡ ಬನ್ನಾಡಿ ಫ್ರೆಂಡ್ಸ್ ತಂಡ ಹಿಂದುಸ್ತಾನ್ ಫ್ರೆಂಡ್ಸ್ ತಂಡವನ್ನು ಸೋಲಿಸಿ‌ ಫೈನಲ್ ಗೆ ಲಗ್ಗೆಯಿಟ್ಟಿದ್ದರು.
ಫೈನಲ್ ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಈಶಾನಿ‌ ಅಜಯ್ ತಂಡ ಪ್ರದೀಪ್ ಶೆಟ್ಟಿ ಅಜೇಯ 24 ರನ್ ಗಳ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತು. ಸ್ಪರ್ಧಾತ್ಮಕ ಸವಾಲನ್ನು ಬೆಂಬತ್ತುವಲ್ಲಿ ವಿಫಲರಾದ ಬನ್ನಾಡಿ ಫ್ರೆಂಡ್ಸ್ ತಂಡ 5 ಓವರ್ ಗಳಲ್ಲಿ ಕೇವಲ 23 ರನ್ ಗಳಿಗೆ 5 ವಿಕೆಟ್ ಕಳೆದು ಕೊಂಡು ಸೋಲೊಪ್ಪಿಕೊಂಡಿತು.  ವಿಜಯೀ ತಂಡ 1,11,111 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿ ಪಡೆದುಕೊಂಡರೆ, ರನ್ನರ್ಸ್ ತಂಡ 55,555 ಸಾವಿರ ನಗದು ಸಹಿತ
ಆಕರ್ಷಕ ಟ್ರೋಫಿ ಪಡೆದುಕೊಂಡರು.ಫೈನಲ್ ಪಂದ್ಯ ಪಂದ್ಯಶ್ರೇಷ್ಟ ಪ್ರಶಸ್ತಿಯ ಚವನ್ ಪಾಲಾದರೆ,ಸರಣಿಯುದ್ದಕ್ಕೂ ಅತ್ಯದ್ಭುತ ಪ್ರದರ್ಶನ ತೋರಿದ ಈಶಾನಿ ಅಜಯ್ ತಂಡದ ಪ್ರಸಾದ್ ನೇರಳಕಟ್ಟೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರೆ,ಕ್ರಮವಾಗಿ ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿಯನ್ನು ಪಾಗರ್ ಮಂಜ,ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಚವನ್ ಪಡೆದುಕೊಂಡರು.ವೀಕ್ಷಕ ವಿವರಣೆಕಾರರಾಗಿ ರಾಘವೇಂದ್ರ ಮಟಪಾಡಿ ಹಾಗೂ ರಾಜಶೇಖರ್ ಕುಂದಾಪುರ ಹಾಗೂ  ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಹಾಗೂ ಜಿಯಾ ಕುಂದಾಪುರ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.

Related Articles