Sunday, September 8, 2024

ಬೈಂದೂರು ಟ್ರೋಫಿ-2019 ಕ್ರಿಕೆಟ್ ಹಬ್ಬ

ಆರ್.ಕೆ.ಆಚಾರ್ಯ

ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಗೆ 80 ರ ದಶಕದಿಂದ ಬೈಂದೂರಿನ ಕ್ರಿಕೆಟಿಗರ ಸೇವೆ ಸದಾ ಸ್ಮರಣೀಯವಾದದ್ದು.ವಿಕ್ರಂ ಸ್ಪೋರ್ಟ್ಸ್ ಕ್ಲಬ್ ಬೈಂದೂರು,‌ ಬ್ಲೂ ಸ್ಟಾರ್ ಕ್ರಿಕೆಟರ್ಸ್  ಹಾಗೂ ಬೈಂದೂರು ಸ್ಪೋರ್ಟ್ಸ್ ಕ್ಲಬ್ ತಂಡಗಳು ಅಂದಿನಿಂದ ಇಂದಿನವರೆಗೂ ಹಲವಾರು ಜಿಲ್ಲಾ,ಹಾಗೂ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಜಯಿಸಿರುತ್ತದೆ.ಅಂತೆಯೇ ಹತ್ತು ಹಲವಾರು ಜಿಲ್ಲಾ,ರಾಜ್ಯ ಮಟ್ಟದ ಪಂದ್ಯಾಟಗಳನ್ನು ಸಂಘಟಿಸಿ ಯುವ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದೆ.

ಈ ಬಾರಿ “ಬೈಂದೂರು ಸ್ಪೋರ್ಟ್ಸ್ ಕ್ಲಬ್” ದ್ವಿತೀಯ ಬಾರಿಗೆ ರಾಜ್ಯಮಟ್ಟದ 40 ಗಜಗಳ ಟೆನ್ನಿಸ್ ಬಾಲ್ ಪಂದ್ಯಾವಳಿಯನ್ನು ಸಂಘಟಿಸಿದ್ದು, ಇದೇ ಜನವರಿ 18,19 ಹಾಗೂ 20 ರಂದು (ಶುಕ್ರವಾರ,ಶನಿವಾರ ಹಾಗೂ ಆದಿತ್ಯವಾರ) ಮೂರುದಿನಗಳ ಕ್ರಿಕೆಟ್ ಹಬ್ಬ ಹೊನಲು ಬೆಳಕಿನಡಿ ಸಾಗಲಿದೆ.ರಾಜ್ಯದ ವಿವಿಧೆಡೆಯ ಬಲಿಷ್ಠ 24 ತಂಡಗಳ ಸ್ಪರ್ಧೆಗೆ ಬೈಂದೂರಿನ ಗಾಂಧಿಮೈದಾನ‌ ಸಜ್ಜಾಗಿ ನಿಂತಿದ್ದು,ರೋಚಕ ರೋಮಾಂಚಕ ಕದನಗಳಿಗೆ ಸಾಕ್ಷಿಯಾಗಲಿದೆ.
ಶ್ರೀ .ಹೆಚ್.ಗುರುಪ್ರಸಾದ್ ಬೈಂದೂರು ಇವರ ಗೌರವಾಧ್ಯಕ್ಷತೆಯಲ್ಲಿ, ಪಾದರಸದಂತಹ ಚುರುಕಿನ  ನಾಯಕ ಕಿರಣ್ ಬೈಂದೂರು ಇವರ ದಕ್ಷ ಸಾರಥ್ಯದಲ್ಲಿ,
ಸಂಘಟನಾ ಚತುರರಾದ ರಾಜೇಶ್ ಆಚಾರ್ ಹಾಗೂ ನೀತರಾಜ್ ಬೈಂದೂರು ಇವರ ಕಾರ್ಯದಕ್ಷತೆಯಲ್ಲಿ
ಈ ಯಶಸ್ವಿ ಪಂದ್ಯಾವಳಿ ನಡೆಯಲಿದ್ದು,ರಾಜ್ಯದ ನಾಮಾಂಕಿತ ಆಟಗಾರರು ಕದನಕ್ಕಿಳಿಯಲಿದ್ದು,ವೀಕ್ಷಕ ವಿವರಣೆ ವಿಭಾಗದ ಸಾರಥ್ಯವನ್ನು ಕನ್ನಡದ ಹರ್ಷ ಭೋಗ್ಲೆ ಕ್ರಿಕೆಟ್ ವಿಶ್ಲೇಷಕ ಕೋಟ ಶಿವನಾರಾಯಣ್ ಐತಾಳ್ ವಹಿಸಲಿದ್ದು ,
ಅಗ್ರ ವೀಕ್ಷಕ ವಿವರಣೆಗಾರರಾದ ಪ್ರಶಾಂತ್ ಅಂಬಲಪಾಡಿ, ವಿನಯ್ ಉದ್ಯಾವರ್ ಹಾಗೂ ರಾಘವೇಂದ್ರ ಮಟಪಾಡಿ ಸಹಿತ 4 ಮಂದಿ ವೀಕ್ಷಕ ವಿವರಣೆಕಾರರು ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪಂದ್ಯಾಕೂಟದ ವೈಭವ ಹೆಚ್ಚಿಸಲಿದ್ದಾರೆ. ಪಂದ್ಯಾಟದ ತೀರ್ಪುಗಾರರಾಗಿ ಕರ್ನಾಟಕ ರಾಜ್ಯದ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ, ಸಂಗಡಿಗರು ಪಂದ್ಯಾಟದ ಆಕರ್ಷಣೆಯನ್ನು ಹೆಚ್ಚಿಸಲಿದ್ದಾರೆ.ಗಿರೀಶ್ ರಾವ್ ನೇತೃತ್ವದ “ಕ್ರಿಕ್ ಸೇ” ಈ ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಲಿದೆ.
“ಬೈಂದೂರು ಟ್ರೋಫಿ-2019” ವಿಜೇತ ತಂಡ ಪ್ರಥಮ ಬಹುಮಾನ ನಗದು 1,11,111 ಲಕ್ಷ ರೂ ಸಹಿತ ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನಿ ತಂಡ 66,666 ಸಾವಿರ ಸಹಿತ ಆಕರ್ಷಕ ಟ್ರೋಫಿಯನ್ನು ಪಡೆಯಲಿದ್ದು, ಇನ್ನಿತರ ವೈಯಕ್ತಿಕ ಆಕರ್ಷಕ ಬಹುಮಾನಗಳು ಅರ್ಹ ತಂಡ,ಆಟಗಾರರು ಪಡೆಯಲಿದ್ದಾರೆ.
ಉದ್ಘಾಟನೆ  ಹಾಗೂ ಸಮಾರೋಪ ಸಮಾರಂಭದಲ್ಲಿ ಅನೇಕ ಗಣ್ಯಾತಿಗಣ್ಯರು ಭಾಗವಹಿಸಲಿದ್ದು,ಹಿರಿಯ ಕಿರಿಯ ಕ್ರೀಡಾ ಸಾಧಕರನ್ನು ಸನ್ಮಾನಿಸಿ,ಪ್ರೋತ್ಸಾಹಿಸಲಾಗುವುದೆಂದು “ಬೈಂದೂರು ಸ್ಪೋರ್ಟ್ಸ್ ಕ್ಲಬ್” ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.ಈ ಹೊನಲು ಬೆಳಕಿನ ಕ್ರಿಕೆಟ್ ಜಾತ್ರೆಗೆ “ಬೈಂದೂರು ಸ್ಪೋರ್ಟ್ಸ್ ಕ್ಲಬ್”ತಮ್ಮೆಲ್ಲಾ ಕ್ರಿಕೆಟ್ ಪ್ರೇಮಿಗಳನ್ನು ಸ್ವಾಗತಿಸಿದ್ದು, www.wordpress-451521-1958220.cloudwaysapps.com ಪರವಾಗಿ ಶುಭಾಶಯಗಳನ್ನು ಕೋರುತ್ತಿದ್ದೇವೆ.

Related Articles