Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಫ್ರೆಂಡ್ಸ್ ಬೆಂಗಳೂರು ತಂಡಕ್ಕೆಹಾಸನಾಂಬ ಟ್ರೋಫಿ

ಆರ್.ಕೆ.ಆಚಾರ್ಯ, ಸ್ಪೋರ್ಟ್ಸ್ ಮೇಲ್ 

“ಹಾಸನಾಂಬ ಕ್ರಿಕೆಟರ್ಸ್” ಹಾಸನ ಇವರ ವತಿಯಿಂದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ನ 2 ದಿನಗಳ  ಕ್ರಿಕೆಟ್ ಟೂರ್ನಿ  ಜನವರಿ 5,6 ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಪಂದ್ಯಾಕೂಟದಲ್ಲಿ ಬೆಂಗಳೂರು,ಮೈಸೂರು,ಚಿತ್ರದುರ್ಗ,ತುಮಕೂರು,
ಉಡುಪಿ,ದಾವಣಗೆರೆ,ಹಾಸನ ಹಾಗೂ ಕೇರಳ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅಗ್ರಮಾನ್ಯ ತಂಡಗಳು ಸ್ಪರ್ಧಿಸಿದ್ದವು.ಫ್ರೆಂಡ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
 ಸೆಮಿಫೈನಲ್ ನಲ್ಲಿ   ನ್ಯಾಶ್ ಬೆಂಗಳೂರು ತಂಡವನ್ನು ರಿಯಲ್ ಫೈಟರ್ಸ್ ಮಲ್ಪೆ ತಂಡ ಮಣಿಸಿದರೆ,
ಎಸ್.ಝಡ್.ಸಿ.ಸಿ‌ ತಂಡವನ್ನು ಫ್ರೆಂಡ್ಸ್ ಬೆಂಗಳೂರು ತಂಡ ಮಣಿಸಿ ಫೈನಲ್ ಗೆ ನೆಗೆದೇರಿದ್ದವು.
ಅಂತಿಮವಾಗಿ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ರಿಯಲ್ ಫೈಟರ್ಸ್ ತಂಡ ಅನುಭವಿ ಎಸೆತಗಾರ ನದೀಮ್ ರವರ ಬಿಗುದಾಳಿಯ ಎದುರು 2 ಓವರ್ ನಲ್ಲಿ ಕೇವಲ 9 ರನ್ ಗಳಿಸಲಷ್ಟೇ ಶಕ್ತವಾಯಿತು.
ಸುಲಭದ ಗುರಿ ಬೆನ್ನತ್ತಿದ ಫ್ರೆಂಡ್ಸ್ ತಂಡ ನವೀನ್ ರವರ ಅಮೋಘ 9 ರನ್  ನೆರವಿನಿಂದ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿದರು.
ವಿಜಯಿ ಫ್ರೆಂಡ್ಸ್  ತಂಡ 1,11,111 ಲಕ್ಷ ರೂ ಸಹಿತ ಆಕರ್ಷಕ ಟ್ರೋಫಿ ಪಡೆದು ಕೊಂಡರೆ,
ರನ್ನರ್ ಅಪ್ ಮಲ್ಪೆಯ ತಂಡ 50,000 ರೂ ನಗದು ಸಹಿತ ಆಕರ್ಷಕ ಟ್ರೋಫಿ ಪಡೆದುಕೊಂಡರು.ಸರಣಿಯುದ್ದಕ್ಕೂ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಫ್ರೆಂಡ್ಸ್ ನ ನದೀಮ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಬೆಸ್ಟ್ ಬ್ಯಾಟ್ಸ್ ಮನ್ ಫ್ರೆಂಡ್ಸ್ ನ ಸಾಗರ್ ಭಂಡಾರಿ ಹಾಗೂ ಬೆಸ್ಟ್ ಬೌಲರ್ ರಿಯಲ್ ಫೈಟರ್ಸ್ ನ ಪರ್ವೇಜ್ ಪಾಲಾಯಿತು.ಪಂದ್ಯಾಟ ಸಂಘಟಿಸಿದ ಹಾಸನಾಂಬ ತಂಡವು ರಾಜ್ಯಕ್ಕೆ ಅನೇಕ ಆಟಗಾರರನ್ನು ಕೊಡುಗೆಯಾಗಿ ನೀಡಿದ್ದು,
ಪ್ರಸಿದ್ಧ ಆಟಗಾರರಾದ ನ್ಯಾಶ್ ನ  ಅಕ್ಷಯ್.ಸಿ.ಕೆ ಹಾಗೂ ಚಮತ್ಕಾರಿ ಆಲ್ ರೌಂಡರ್ ಪುರಷೋತ್ತಮ್ (ಪುರುಷಿ) ಈ ತಂಡದಲ್ಲಿ ಹಲವು ವರ್ಷಗಳ ಸೇವೆಗೈದಿರುವುದು ಉಲ್ಲೇಖನೀಯ…

administrator