Wednesday, November 6, 2024

ವಿರಾಟ್ ವಿಜಯ, ಧೋನಿ ಅಜೇಯ

ಏಜೆನ್ಸೀಸ್ ಅಡಿಲೇಡ್

ನಾಯಕ  ವಿರಾಟ್ ಕೊಹ್ಲಿ ಅವರ ಶತಕ (104) ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ  ಅವರ ಅಜೇಯ ಅ‘ರ್ ಶತಕ (55*)ದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಜಯ ಗಳಿಸಿದ್ದು, ಇದರೊಂದಿಗೆ ಸರಣಿ 1-1ರಲ್ಲಿ ಸಮಬಲಗೊಂಡಿದೆ.

ಭಾರತದ ಜಯದಲ್ಲಿ ಆರಂಭಿಕ ಆಟಗಾರ  (43) ಹಾಗೂ ಶಿಖರ್ ಧವನ್ (32) ಅವರ ಕೊಡುಗೆ ಪ್ರಮುಖವಾಗಿತ್ತು. ದಿನೇಶ್ ಕಾರ್ತಿಕ್  ಅವರ ಸಮಯೋಚಿತ 25* ರನ್ ಜಯದ ಗುರಿ ತಲಪುವಲ್ಲಿ ಪ್ರಮುಖ ಪಾತ್ರವಹಿಸಿತು. 149 ನಿಮಿಷಗಳ ಕಾಲ ಕ್ರೀಸಿನಲ್ಲಿದ್ದ ವಿರಾಟ್ ಕೊಹ್ಲಿ  112 ಎಸೆತಗಳನ್ನೆದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ  104 ರನ್ ಗಳಿಸಿ ಅಂತಾರಾಷ್ಟ್ರೀಯ ಏಕದಿನದಲ್ಲಿ 39ನೇ ಶತಕ ದಾಖಲಿಸಿದರು.
299 ರನ್ ಜಯದ ಗುರಿ ಹೊತ್ತ ಭಾರತ  ಇನ್ನೂ 4  ಎಸೆತ ಬಾಕಿ ಇರುವಾಗಲೇ ಕೇವಲ  4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ  ಶಾನ್ ಮಾರ್ಷ್ (131) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (48) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ಭಾರತದ ಪರ ‘ಭುನವೇಶ್ವರ್ ಕುಮಾರ್ (45ಕ್ಕೆ 4) ಹಾಗೂ ಮೊಹಮ್ಮದ್ ಶಮಿ (58ಕ್ಕೆ 3) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ  ಗೌರವಕ್ಕೆ ಪಾತ್ರರಾದರು. inಜನವರಿ 18ರಂದು ಇತ್ತಂಡಗಳು ಮೂರನೇ ಏಕದಿನ ಪಂದ್ಯವನ್ನಾಡಲಿವೆ.

Related Articles