ಮಂಗಳೂರಿನಲ್ಲಿ ಟಾರ್ಪೆಡೋಸ್ ಟಿ10 ಬ್ಯಾಷ್

0
239
ಸ್ಪೋರ್ಟ್ಸ್ ಮೇಲ್ ವರದಿ

ಕ್ರಿಕೆಟ್ ಮೂಲಕ ಕರಾವಳಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಇದೇ ತಿಂಗಳ 28ರಿಂದ ಮಾರ್ಚ್ ೪ವರೆಗೆ ಮಂಗಳೂರಿನಲ್ಲಿ 10 ಓವರ್‌ಗಳ ಲೆದರ್‌ಬಾಲ್ ಕ್ರಿಕೆಟ್ ಹಬ್ಬವನ್ನು ಆಚರಿಸುತ್ತಿದೆ.  ಮುಕ್ತ ಹಾಗೂ ಕಾರ್ಪೊರೇಟ್ ವಿಭಾಗದಲ್ಲಿ ಚಾಂಪಿಯನ್‌ಷಿಪ್ ನಡೆಯಲಿದೆ.

ಎಲೈಟ್ ಹಾಗೂ ಕಾರ್ಪೊರೇಟ್ ವಿಭಾಗಗಳಲ್ಲಿ ನಡೆಯಲಿರುವ ಟೂರ್ನಿಯು ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಎಲೈಟ್ ಮುಕ್ತ ವಿಭಾಗದಲ್ಲಿ ಪಾಲ್ಗೊಳ್ಳುವ ತಂಡಕ್ಕೆ ಪ್ರವೇಶ ಶುಲ್ಕ 15,000 ರೂ.  ನಗದು ಬಹುಮಾನ 1,00,000 ರೂ. ಆಗಿರುತ್ತದೆ. ರನ್ನರ್ ಅಪ್ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ 50,000 ರೂ. ನಗದು ಬಹಮಾನವಿರುತ್ತದೆ.  ಕಾರ್ಪೋರೇಟ್ ವಿಭಾಗದಲ್ಲಿ ವಿಜೇತ ತಂಡಕ್ಕೆ 50,000 ರೂ. ನಗದು ಬಹುಮಾನ, ರನ್ನರ್ ಅಪ್‌ಗೆ 25,000 ರೂ. ನೀಡಲಾಗುದು.  ಕಾರ್ಪೊರೇಟ್ ಪ್ರವೇಶ ಶುಲ್ಕ 10,000 ರೂ. ಆಗಿರುತ್ತದೆ.
ಪಂದ್ಯಗಳಿಗೆ ಬಿಳಿ ಲೆದರ್‌ಬಾಲ್ ಬಳಸಲಾಗುವುದು, ಆಸ್ಟ್ರೋ ರ್ಟ್ ಹಾಗೂ ಮ್ಯಾಟಿಂಗ್ ಗ್ರೌಂಡ್ಸ್‌ನಲ್ಲಿ ಪಂದ್ಯ ನಡೆಯಲಿದೆ. ಬಣ್ಣದ ಜೆರ್ಸಿ, ಭೋಜನ ಹಾಗೂ ಉಪಹಾರ ನೀಡಲಾಗುತ್ತದೆ.  ಹೊರಗಡೆಯಿಂದ ಬರುವ ತಂಡಗಳಿಗೆ ಸ್ಥಳೀಯ ಮಟ್ಟದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.  ಕ್ರಿಕೆಟ್‌ನಲ್ಲಿ ಬರುವ ಎಲ್ಲ ವೈಯಕ್ತಿಕ ಬಹುಮಾನ  ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಸಂತೋಷ್-9483077325, ನಿತಿನ್-7892797488, ರಹೀಮ್-9036420858
ಇ-ಮೇಲ್ : t10.torpedoesclub@gmail.com
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10, ಫೆಬ್ರವರಿ   2019