ಅಕ್ಷತಾಗೆ ಚಿನ್ನ, ಸ್ವಾತಿಗೆ ಬೆಳ್ಳಿ

0
284
ಸ್ಪೋರ್ಟ್ಸ್ ಮೇಲ್ ವರದಿ

ದುಬೈನಲ್ಲಿ ನಡಿಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಕ್ಷತಾ ಪೂಜಾರಿ ಹಾಗೂ ಸ್ವಾತಿ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಸಾಧನೆ ಮಾಡಿದ್ದಾರೆ.

52 ಕೆ ಜಿ ವಿಭಾಗದಲ್ಲಿ ಹಿರಿಯರ ವಿಭಾಗದಲ್ಲಿ ಅಕ್ಷತಾ ಚಿನ್ನ ಗೆದ್ದರು. 57ಕೆ ಜಿ ಕಿರಿಯರ ವಿಭಾಗದಲ್ಲಿ ಸ್ವಾತಿ ಎರಡನೇ ಸ್ಥಾನ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರು.
52ಕೆ ಜಿ ಜೂನಿಯರ್ ವಿಭಾಗದಲ್ಲಿ ನೀಮಾ ಕುಮಾರಿ ಅಗ್ರ ಸ್ಥಾನ ಗಳಿಸಿ ಚಿನ್ನ ಗೆದ್ದರು.  63 ಕೆ ಜಿ ವಿಭಾಗದಲ್ಲಿ ನೀಮಾ ಕುಮಾರಿ ಅಗ್ರ ಸ್ಥಾನ ಗಳಿಸಿ ಚಿನ್ನ ತಮ್ಮದಾಗಿಸಿಕೊಂಡರು.  84 ಕೆ ಜಿ ವಿಭಾಗದಲ್ಲಿ ಉಷಾ ಆರ್ ಮೊದಲ ಸ್ಥಾನ ಗಳಿಸಿ ಚಿನ್ನ ಗೆದ್ದರು.
84+ ಕೆ ಜಿ ವಿಭಾಗದ ಸಬ್ ಜೂನಿಯರ್ ವಿಭಾಗದಲ್ಲಿ ಪಂಚಮಿ ಬೆಳ್ಳಿ ಗೆದ್ದರು.  63ಕೆ ಜಿ ವಿಭಾಗದಲ್ಲಿ ವೆನಿಂಜಿಯಾ ಎ ಕಾರ್ಲೊ 77.5 ಕೆ ಜಿ ಭಾರವೆತ್ತಿ ಬೆಳ್ಳಿ ಪದಕ ಗೆದ್ದರು.