Saturday, October 12, 2024

Women’s Premier League 2023: ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು : ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League (WPL) 2023) ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ರಾಯಲ್ ಚಾಲೆಂಜರ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಉದ್ಘಾಟನಾ ಪಂದ್ಯ ಮಾರ್ಚ್ 4ರಂದು ನಡೆಯಲಿದ್ದು, ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್ ಸೇರಿದಂತೆ ಒಟ್ಟು ಐದು ತಂಡಗಳು ಪಾಲ್ಗೊಳ್ಳಲಿವೆ. ಈಗಾಗಲೇ WPL ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಸ್ಮೃತಿ ಮಂದಾನ 3.4 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಒಟ್ಟು 23 ದಿನಗಳ ಕಾಲ ನಡೆಯಲಿದ್ದು, ಟೂರ್ನಿಯಲ್ಲಿ ಒಟ್ಟು 20 ಲೀಗ್ ಪಂದ್ಯಗಳು ನಡೆಯಲಿವೆ. ಇದರಲ್ಲಿ ಎರಡು ಪ್ಲೇ ಆಪ್ ಪಂದ್ಯಗಳು ನಡೆಯಲಿವೆ. ಮಾರ್ಚ್ 24ಕ್ಕೆ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಂತಿಮವಾಗಿ ಮಾರ್ಚ್ 26ರಂದು ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Women’s Premier League 2023: ಸಂಪೂರ್ಣ ವೇಳಾಪಟ್ಟಿ

1. 4-ಮಾರ್ಚ್-2023; ಗುಜರಾತ್ Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
2. 5-ಮಾರ್ಚ್-2023; ಬೆಂಗಳೂರು Vs ಡೆಲ್ಲಿ (ಬ್ರೆಬೌರ್ನ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
3. 5-ಮಾರ್ಚ್-2023; ಯು.ಪಿ Vs ಗುಜರಾತ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
4. 6-ಮಾರ್ಚ್-2023; ಮುಂಬೈ Vs ಬೆಂಗಳೂರು (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
5. 7-ಮಾರ್ಚ್-2023; ಡೆಲ್ಲಿ Vs ಯು.ಪಿ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
6. 8-ಮಾರ್ಚ್-2023; ಬೆಂಗಳೂರು Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
7. 9-ಮಾರ್ಚ್-2023; ಡೆಲ್ಲಿ Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
8. 10-ಮಾರ್ಚ್-2023; ಬೆಂಗಳೂರು Vs ಯು.ಪಿ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
9. 11-ಮಾರ್ಚ್-2023; ಡೆಲ್ಲಿ Vs ಗುಜರಾತ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
10. 12-ಮಾರ್ಚ್-2023; ಯು.ಪಿ Vs ಮುಂಬೈ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
11. 13-ಮಾರ್ಚ್-2023; ಡೆಲ್ಲಿ Vs ಬೆಂಗಳೂರು (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
12. 14-ಮಾರ್ಚ್-2023; ಗುಜರಾತ್ Vs ಮುಂಬೈ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
13. 15-ಮಾರ್ಚ್-2023; ಬೆಂಗಳೂರು Vs ಯು.ಪಿ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
14. 16-ಮಾರ್ಚ್-2023; ಡೆಲ್ಲಿ Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
15. 18-ಮಾರ್ಚ್-2023; ಯು.ಪಿ Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
16. 18-ಮಾರ್ಚ್-2023; ಬೆಂಗಳೂರು Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
17. 20-ಮಾರ್ಚ್-2023; ಯು.ಪಿ Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
18. 20-ಮಾರ್ಚ್-2023; ಮುಂಬೈ Vs ಡೆಲ್ಲಿ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
19. 21-ಮಾರ್ಚ್-2023; ಬೆಂಗಳೂರು Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
20. 21-ಮಾರ್ಚ್-2023; ಯು.ಪಿ Vs ಡೆಲ್ಲಿ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
21. 24-ಮಾರ್ಚ್-2023; ಎಲಿಮಿನೇಟರ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
22. 26-ಮಾರ್ಚ್-2023; ಫೈನಲ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)

BCCI announces Schedule for Women's Premier League 2023 WPL 1

ಇದನ್ನೂ ಓದಿ : WPL Auction 2023 : ಬೆಂಗಳೂರಿಗೆ ಸ್ಮೃತಿ ಮಂದಾನ, ಮುಂಬೈಗೆ ಹರ್ಮನ್ ಪ್ರೀತ್ ಕೌರ್

ಇದನ್ನೂ ಓದಿ : ಕ್ರೀಡಾ ಸಾಧಕರ ಅಮ್ಮಂದಿರಿಗೆ ಜೀಜಾ ಮಾತಾ ಗೌರವ ಪ್ರಶಸ್ತಿ

Related Articles