Tuesday, April 16, 2024

WPL Auction 2023 : ಬೆಂಗಳೂರಿಗೆ ಸ್ಮೃತಿ ಮಂದಾನ, ಮುಂಬೈಗೆ ಹರ್ಮನ್ ಪ್ರೀತ್ ಕೌರ್

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (WPL Auction 2023 ) ಹರಾಜು ಪ್ರಕ್ರಿಯೆ ನಡೆದಿದ್ದು, ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ. ಸ್ಮೃತಿ ಮಂದಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ರೆ, ಟೀಂ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ.

ಮುಂಬೈನಲ್ಲಿ ನಡೆದ ಚೊಚ್ಚಲ ಮಹಿಳಾ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾದ ಎಡಗೈ ಆಟಗಾರ್ತಿ ಸ್ಮೃತಿ ಮಂದಾನ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಬರೋಬ್ಬರಿ 3.4 ಕೋಟಿ ಮೊತ್ತಕ್ಕೆ ಸ್ಮೃತಿ ಮಂದಾನ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಆರ್ ಸಿಬಿ ತಂಡ ಯಶಸ್ವಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 18 ನಂಬರ್ ಜರ್ಸಿ ತೊಟ್ಟು ವಿರಾಟ್ ಕೊಹ್ಲಿ ಆಡುತ್ತಿದ್ರೆ, ಇನ್ಮುಂದೆ ಮಹಿಳಾ ತಂಡದಲ್ಲಿ ಅದೇ ಸಂಖ್ಯೆ ಜರ್ಸಿ ತೊಟ್ಟು ಮಂದಾನ ಬ್ಯಾಟ್ ಬೀಸಲಿದ್ದಾರೆ.

ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. 1.8 ಕೋಟಿ ಮೊತ್ತಕ್ಕೆ ಕೌರ್ ಹರಾಜಾಗಿದ್ದಾರೆ. ಉಳಿದಂತೆ ದೀಪ್ತಿ ಶರ್ಮಾ 2.6 ಕೋಟಿ, ಜೆಮೈಮಾ ರಾಡ್ರಿಗಸ್ 2.2 ಕೋಟಿ, ಶಿಫಾಲಿ ವರ್ಮಾ 2 ಕೋಟಿ, ರಿಚಾ ಘೋಷ್ 1.9 ಕೋಟಿ, ಪೂಜಾ ವಸ್ತ್ರಕಾರ್ 1.9 ಕೋಟಿ, ಯಸ್ತಿಕಾ ಭಾಟಿಯಾ 1.5 ಕೋಟಿ, ರೇಣುಕಾ ಠಾಕೂರ್ 1.5 ಕೋಟಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಇನ್ನು ವಿದೇಶಿ ಆಟಗಾರರ ಪೈಕಿ ಆಸ್ಟ್ರೇಲಿಯಾದ ಆಶ್ಲೆ ಗಾರ್ಡ್ನರ್ 3.2 ಕೋಟಿ, ಬೆತ್ ಮೂನಿ 2 ಕೋಟಿ, ಎಲೀಸ್ ಪೆರಿ 1.7 ಕೋಟಿ, ತಹಿಲಾ ಮೆಗ್ರಾತ್ 1.4 ಕೋಟಿ, ಇಂಗ್ಲೆಂಡ್ ಸೋಫೀ ಎಕ್ಲಿಸ್ಟೋನ್ 1.8 ಕೋಟಿ ಹಾಗೂ ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ.

ಮಹಿಳಾ ಐಪಿಎಲ್ ತಂಡಗಳ ವಿವರ :

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಸ್ಮೃತಿ ಮಂಧನ: 3.4 ಕೋಟಿ
ರಿಚಾ ಘೋಷ್: 1.9 ಕೋಟಿ
ರೇಣುಕಾ ಠಾಕೂರ್: 1.5 ಕೋಟಿ
ಎಲೀಸ್ ಪೆರಿ (ಆಸ್ಟ್ರೇಲಿಯಾ): 1.7 ಕೋಟಿ
ಸೋಫೀ ಡಿವೈನ್ (ನ್ಯೂಜಿಲೆಂಡ್): 50 ಲಕ್ಷ

ಡೆಲ್ಲಿ ಕ್ಯಾಪಿಟಲ್ಸ್:
ಜೆಮೈಮಾ ರಾಡ್ರಿಗ್ಸ್: 2.2 ಕೋಟಿ
ಶೆಫಾಲಿ ವರ್ಮಾ: 2 ಕೋಟಿ
ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ): 1.1 ಕೋಟಿ
ಮರಿಜೇನ್ ಕಪ್ (ದಕ್ಷಿಣ ಆಫ್ರಿಕಾ): 1.5 ಕೋಟಿ
ಶಿಖಾ ಪಾಂಡೆ: 60 ಲಕ್ಷ
ರಾಧಾ ಯಾದವ್: 40 ಲಕ್ಷ

ಗುಜರಾತ್ ಜೈಂಟ್ಸ್:
ಆಶ್ಲೆ ಗಾರ್ಡ್ನರ್ (ಆಸ್ಟ್ರೇಲಿಯಾ): 3.2 ಕೋಟಿ
ಬೆತ್ ಮೂನಿ (ಆಸ್ಟ್ರೇಲಿಯಾ): 2 ಕೋಟಿ
ಸೋಫಿಯಾ ಡಂಕ್ಲೀ (ಇಂಗ್ಲೆಂಡ್): 60 ಲಕ್ಷ
ದಿಯೇಂದ್ರ ಡಾಟಿನ್ (ವೆಸ್ಟ್ ಇಂಡೀಸ್): 60 ಲಕ್ಷ
ಹರ್ಲೀನ್ ಡಿಯೋಲ್: 40 ಲಕ್ಷ
ಅನ್ನಾಬೆಲ್ ಸದರ್ಲೆಂಡ್ (ಆಸ್ಟ್ರೇಲಿಯಾ): 70 ಲಕ್ಷ
ಸ್ನೇಹ್ ರಾಣಾ: 75 ಲಕ್ಷ

ಮುಂಬೈ ಇಂಡಿಯನ್ಸ್:
ಪೂಜಾ ವಸ್ತ್ರಕಾರ್: 1.9 ಕೋಟಿ
ಹರ್ಮನ್ ಪ್ರೀತ್ ಕೌರ್: 1.8 ಕೋಟಿ
ಯಸ್ತಿಕಾ ಭಾಟಿಯಾ: 1.5 ಕೋಟಿ
ಅಮೆಲಿಯಾ ಕೆರ್ (ನ್ಯೂಜಿಲೆಂಡ್): 1 ಕೋಟಿ
ನಥಾಲೀ ಸಿವರ್ (ಇಂಗ್ಲೆಂಡ್): 3.2 ಕೋಟಿ

ಯು.ಪಿ ವಾರಿಯರ್ಸ್:
ದೀಪ್ತಿ ಶರ್ಮಾ: 2.6 ಕೋಟಿ
ಸೋಫೀ ಎಕ್ಲಿಸ್ಟೋನ್ (ಇಂಗ್ಲೆಂಡ್): 1.8 ಕೋಟಿ
ತಹಿಲಾ ಮೆಗ್ರಾತ್ (ಆಸ್ಟ್ರೇಲಿಯಾ): 1.4 ಕೋಟಿ
ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ): 1 ಕೋಟಿ
ಅಲೀಸಾ ಹೀಲಿ (ಆಸ್ಟ್ರೇಲಿಯಾ): 70 ಲಕ್ಷ
ರಾಜೇಶ್ವರಿ ಗಾಯಕ್ವಾಡ್ (ಭಾರತ): 70 ಲಕ್ಷ
ಶ್ರೇತಾ ಸೆಹ್ರಾವತ್: 40 ಲಕ್ಷ ಪಾರ್ಷವಿ ಚೋಪ್ರಾ: 10 ಲಕ್ಷ

ಇದನ್ನೂ ಓದಿ : ಅರಬ್‌ ನಾಡಿನ ಅನುಭವಿ ಅಂಪೈರ್‌ ಕರ್ನಾಟಕದ ಅರುಣ್‌ ಡಿʼಸಿಲ್ವಾ

ಇದನ್ನೂ ಓದಿ : ಕುಣಿಗಲ್‌ನಲ್ಲಿ ಕ್ರೀಡೆಗೆ ಜೀವ ತುಂಬಿದ ಕೃಷಿಕ, ಕ್ರೀಡಾ ಗುರು ರಂಗನಾಥ

WPL Auction 2023 smriti Mandhana RCB Harmanpreet Kaur MI Women’s IPL sold unsold players List

Related Articles