Sunday, September 8, 2024

ಪ್ರೀ ಕ್ವಾರ್ಟರ್ ಫೈನಲ್ ತಲುಪಿದ ಲಕ್ಷ್ಯಸೇನ್

 ಮರ್ಖಾಮ್:

ಲಕ್ಷ್ಯ ಸೇನ್ ಹಾಗೂ ಭಾರತದ ಡಬಲ್ಸ್ ಜೋಡಿ ಕೆನಾಡದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಕಿರಿಯರ ಚಾಂಪಿಯನ್‍ಶಿಪ್ ನಲ್ಲಿ ಪ್ರೀ ಕ್ವಾರ್ಟರ್ ಫೈನಲ್‍ಗೆ ತಲುಪಿದೆ.

ನಾಲ್ಕನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರು ಇಟಲಿಯ ಗಿಯಾವನ್ನಿ ಟೊಟಿ ವಿರುದ್ಧ 21-7, 21-13 ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಅಂತಿಮ 16ರ ಹಂತದಲ್ಲಿ ಚೈನೀಸ್ ತೈಪೈನ ಚೆನ್ ಶೈ ಚೆಂಗ್ ವಿರುದ್ಧ ಸೆಣಸಲಿದ್ದಾರೆ.
ಭಾರತದ ಶ್ರೀಕೃಷ್ಣ ಸಾಯ್ ಕುಮಾರ್ ಹಾಗೂ ವಿಷ್ಣು ವರ್ಧನ್ ಪುರುಷರ ಡಬಲ್ಸ್ ಜೋಡಿ ಸ್ವೀಡೆನ್ ನ ಜಿಯೊಲ್ ಹ್ಯಾನ್ಸನ್ ಮತ್ತು ಮಲ್ಕರ್ ಜೋಡಿಯ ವಿರುದ್ಧ ಗೆಲುವು ಸಾಧಸಿಸುವ ಮೂಲಕ ಪ್ರೀ ಕ್ವಾರ್ಟರ್ ಫೈನಲ್ ಗೆ ತಲುಪಿತು.

Related Articles