Sunday, May 26, 2024

ಡುಮಿನಿ, ಕಮಿನ್ಸ್ ಕೈ ಬಿಟ್ಟ ಮುಂಬೈ ಇಂಡಿಯನ್ಸ್

ಮುಂಬೈ:

ದಕ್ಷಿಣ ಆಫ್ರಿಕಾ ತಂಡದ ಡುಮಿನಿ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಶ್ರೀಲಂಕಾ ತಂಡದ ಅಖಿಲಾ ಧನಂಜಯ ಹಾಗೂ ಬಾಂಗ್ಲಾದೇಶದ ಮುಷ್ತಪಿಕ್ಯೂರ್ ರಹಮನ್ ಅವರನ್ನು ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಕೈ ಬಿಟ್ಟಿದ್ದು. 18 ಆಟಗಾರರನ್ನು ಉಳಿಸಿಕೊಂಡಿದೆ.

ಕಳೆದ ಆವೃತ್ತಿಯಲ್ಲಿ ಕಮ್ಮಿನ್ಸ್ ಅವರನ್ನು 5.4 ಕೋಟಿಗೆ ತೆಗೆದುಕೊಳ್ಳಲಾಗಿತ್ತು. ಆದರೆ, ಟೂರ್ನಿಗೂ ಮುನ್ನ ಅವರು ಗಾಯದಿಂದಾಗಿ ಹೊರನಡೆದಿದ್ದರು. ಮುಷ್ತಿಪಿಕ್ಯೂರ್ ರಹಮನ್ 2.2 ಕೋಟಿಗೆ ಮುಂಬೈ ತಂಡ ಸೇರಿಕೊಂಡಿದ್ದರು. ಆದರೆ, ಕಳೆದ ಆವೃತ್ತಿಯಲ್ಲಿ ಕೇವಲ ಏಳು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಇನ್ನೂ ಡುಮಿನಿ 1 ಕೋಟಿ ಪಡೆದು ಆಡಿದ ಆರು ಪಂದ್ಯಗಳಲ್ಲಿ ಕೇವಲ 36 ರನ್ ಗಳಿಸಿದ್ದರು. ಇವರ ಜತೆ, ದೇಶೀಯ ಆಟಗಾರರಾದ ಸೌರಭ್ ತಿವಾರಿ, ಪ್ರದೀಪ್ ಸಂಗ್ವನ್, ಶರದ್ ಲಂಬಾ ಸೇರಿದಂತೆ 10 ಆಟಗಾರರನ್ನು ಮುಂಬೈ ಇಂಡಿಯನ್ಸ್ ಕೈ ಬಿಟ್ಟಿದೆ.

Related Articles