Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿದರ್ಭ ಎದುರು ಡ್ರಾಗೆ ತೃಪ್ತಿಗೊಂಡ ಕರ್ನಾಟಕ

ನಾಗ್ಪುರ:

ಕರ್ನಾಟಕ ಹಾಗೂ ವಿದರ್ಭ ತಂಡಗಳ ನಡುವಿನ ರಣಜಿ ಟ್ರೋಫಿ ಎಲೈಟ್ ಗುಂಪು(ಎ) ಎರಡನೇ ಸುತ್ತಿನ ಪಂದ್ಯ ಅಂತಿಮವಾಗಿ ಡ್ರಾಗೆ ಸಮಾಪ್ತಿಯಾಯಿತು.

 72 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಅಂತಿಮ ದಿನ ದ್ವಿತೀಯ ಇನಿಂಗ್ಸ್  ಮುಂದುವರಿಸಿದ ವಿದರ್ಭ 86.1 ಓವರ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 228 ರನ್ ದಾಖಲಿಸಿತು. ವಿದರ್ಭ ಪರ ಎರಡನೇ ಇನಿಂಗ್ಸ್ ನಲ್ಲೂ ಆಸರೆಯಾದ ಕನ್ನಡಿಗ ಗಣೇಶ್ ಸತೀಶ್ 164 ಎಸೆತಗಳಲ್ಲಿ 79 ರನ್ ಗಳಿಸಿದರು. ಇವರ ಜತೆ, ಅಪೂರ್ವ್ ವಾಂಖಡೆ 51 ರನ್ ಗಳಿಸಿದರು. ಕರ್ನಾಟಕ ಪರ ಜೆ.ಸುಚಿತ್ ಐದು ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಕರ್ನಾಟಕಕ್ಕೆ ವಿದರ್ಭ 158 ರನ್ ಗುರಿ ನೀಡಿತು. ಗುರಿ ಬೆನ್ನತ್ತಿದ ಕರ್ನಾಟಕ ಆರಂಭಿಕ ಆಗಾತ ಅನುಭವಿಸಿತು. ತಂಡದ ಮೊತ್ತ 24 ರನ್ ಇರುವಾಗಲೇ ಮೂರು ವಿಕೆಟ್ ಕಳೆದುಕೊಂಡು ಆºಗಾಥ ಅನುಭವಿಸಿತು. ವಿದರ್ಭ ಪರ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಕಬಳಿಸಿದ್ದ ಆದಿತ್ಯ ಸರ್ವಾತೆ ಎರಡನೇ ಇನಿಂಗ್ಸ್ ನಲ್ಲೂ ಕರ್ನಾಟಕ ತಂಡಕ್ಕೆ ಸಿಂಹ ಸ್ವಪ್ನರಾದರು. ಕರ್ನಾಟಕದ ರವಿ ಕುಮಾರ್ ಸಮರ್ಥ್(30), ಕರುಣ್ ನಾಯರ್(3), ಕೃಷ್ಣಮೂರ್ತಿ ಸಿದ್ಧಾರ್ಥ್(16) ಹಾಗೂ ಸ್ಟುವರ್ಟ್ ಬಿನ್ನಿ(0) ಅವರ ವಿಕೆಟ್ ಗಳನ್ನು ಬಹುಬೇಗ ಉರುಳಿಸಿದರು. ಕರ್ನಾಟಕ ಪರ ಸಮರ್ಥ್ ಬಿಟ್ಟರೆ ಇನ್ನುಳಿದ ಬ್ಯಾಟ್ಸ್ ಮನ್ ಗಳು ವಿಫಲರಾದರು. ಒಟ್ಟಾರೆ, ಕನಾಟಕ ಅಂತಿಮ ದಿನದ ಮುಕ್ತಾಯಕ್ಕೆ 33 ಓವರ್ ಗಳಿಗೆ ಆರು ವಿಕೆಟ್ ಕಳೆದುಕೊಂಡು 76 ರನ್ ದಾಖಲಿಸಿತು.  ಕೊನೆಯದಾಗಿ ಉಭಯ ತಂಡಗಳ ನಡುವಿನ ಕಾದಾಟ ಡ್ರಾನಲ್ಲಿ ಸಮಾಪ್ತಿಯಾಯಿತು.
ಕರ್ನಾಟಕ ಪರ ಸ್ಪಿನ್ನರ್ ಜೆ.ಸುಚಿತ್ ಹಾಗೂ ವಿದರ್ಭ ಪರ ಆದಿತ್ಯಾ ಸರ್ವಾತೆ ಎರಡೂ ಇನಿಂಗ್ಸ್ ಗಳಲ್ಲಿ ಒಂಬತ್ತು ವಿಕೆಟ್ ಕಬಳಿಸಿದರು. ಕನಾಟಕ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ ಪರಿನಾಮ ಮೂರು ಅಂಕಗಳನ್ನು ತೆಕ್ಕೆಗೆ ಹಾಕಿಕೊಂಡರೆ, ವಿದರ್ಭ ತಂಡ ಒಂದು ಅಂಕ ಗಳಿಸಿತು.

administrator